KL Rahul: ನಾನು ಇನ್ನೇನು ಮಾಡಬೇಕು ಎಂದೆನಿಸುತ್ತದೆ ಎಂದು ಕೆ.ಎಲ್ ರಾಹುಲ್ ಹೇಳಿದ್ಯಾಕೆ..?

ಇತ್ತೀಚೆಗೆ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದಿದೆ. ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಭಾರತಕ್ಕೆ 265 ರನ್ಗಳ ಸಾಧಾರಣ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ ಇನ್ನೂ 2 ಓವರ್ ಬಾಕಿ ಇರುವಂತೆಯೇ ಗೆದ್ದು ಬೀಗಿದ್ದಾರೆ. ಭಾರತ ತಂಡದ ಗೆಲುವಿನಲ್ಲಿ ಕೆ.ಎಲ್ ರಾಹುಲ್ ಪ್ರಮುಖ ಪಾತ್ರವಹಿಸಿದ್ದಾರೆ.
ಇದರ ಬೆನ್ನಲ್ಲೇ ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಮಾತನಾಡಿದ್ದಾರೆ. ಪ್ರತಿ ಸರಣಿಯಲ್ಲೂ ನಾನು ಉತ್ತಮವಾಗಿ ಆಡಿದ ಬಳಿಕ ಅಥವಾ ಏಕದಿನ ಕ್ರಿಕೆಟ್ನಿಂದ ಬ್ರೇಕ್ ತೆಗೆದುಕೊಂಡ ಬಳಿಕ, ಇಲ್ಲ ನಾಲ್ಕೈದು ತಿಂಗಳುಗಳ ನಂತರ ಮತ್ತೆ ನಾನು ಏಕದಿನ ಸರಣಿ ಆಡಲು ಮುಂದಾಗುತ್ತಿದ್ದಂತೆ ಅಲ್ಲೊಂದು ಪ್ರಶ್ನೆ ಹುಟ್ಟಿಕೊಂಡಿರುತ್ತದೆ. ರಾಹುಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುತ್ತಾನಾ? ಎಂಬುದು.
2020 ರಿಂದ, ನಾನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ಈ ಕ್ರಮಾಂಕದಲ್ಲಿ ನಾನು ಆಡುತ್ತಿದ್ದೆ ಎಂಬುದನ್ನು ಸಹ ಜನರು ಮರೆತುಬಿಡುತ್ತಾರೆ. ಪ್ರತಿ ಬಾರಿ ನಾನು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುತ್ತಾನಾ ಎಂಬ ಪ್ರಶ್ನೆ ಹುಟ್ಟಿಕೊಂಡಾಗ, ನಾನು ಇನ್ನೇನು ಮಾಡಬೇಕು ಎಂದು ನನ್ನನ್ನೇ ನಾನು ಪ್ರಶ್ನಿಸಿದ್ದೇನೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದಂತೆ ನಾನು ಆಡಿದ್ದೇನೆ ಮತ್ತು ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ಅವರು ಯಾವ ಕ್ರಮಾಂಕದಲ್ಲಿ ಆಡಬೇಕೆಂದು ತಿಳಿಸಿದ್ದಾರೊ ಅದೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದೇನೆ. ಇದಾಗ್ಯೂ ಪ್ಲೇಯಿಂಗ್ ಇಲೆವೆನ್ನಲ್ಲಿ ನನ್ನ ಸ್ಥಾನದ ಬಗ್ಗೆ ಪ್ರಶ್ನೆ ಮೂಡಿದಾಗ, ನಿಜವಾಗಲೂ ನಾನು ಇನ್ನೇನು ಮಾಡಬೇಕು ಎಂದೆನಿಸುತ್ತದೆ ಎಂದು ಕೆಎಲ್ ರಾಹುಲ್ ಹತಾಶೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






