ನಾನು ಯಾರನ್ನೋ ಗುರಿಯಾಗಿಸಿ ಪೋಸ್ಟ್ ಮಾಡಿರಲಿಲ್ಲ: ಸರಣಿ ಪೋಸ್ಟ್ʼಗಳ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಸುಮಲತಾ

ಮಾರ್ಚ್ 12, 2025 - 16:03
 0  21
ನಾನು ಯಾರನ್ನೋ ಗುರಿಯಾಗಿಸಿ ಪೋಸ್ಟ್ ಮಾಡಿರಲಿಲ್ಲ: ಸರಣಿ ಪೋಸ್ಟ್ʼಗಳ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಸುಮಲತಾ

ಬೆಂಗಳೂರುಇನ್ಸ್ಟಾದಲ್ಲಿ ಮಾಜಿ ಸಂಸದೆ ಹಾಗೂ ನಟಿ ಸುಮಲತಾ ಅವರನ್ನು ದರ್ಶನ್ ಅವರು ಅನ್ಫಾಲೋ ಮಾಡಿದ್ದಾರೆ. ಇದರ ಬೆನ್ನಲ್ಲೇ ಸುಮಲತಾ ಅವರು ತಮ್ಮ ಇನ್ಸ್ಟಾದಲ್ಲಿ ಸರಣಿ ಸ್ಟೇಟಸ್ಗಳನ್ನ ಬೇಸರದಲ್ಲೇ ಶೇರ್ ಮಾಡಿರುವುದು ಚರ್ಚೆಗೆ ಕಾರಣವಾಗಿತ್ತು ಇದರ ಬೆನ್ನಲ್ಲೇ ಸುಮಲತಾ ಅವರೇ ಸ್ಪಷ್ಟನೆ ನೀಡಿದ್ದಾರೆ. ‘ಕೊನೆ ಉಸಿರು ಇರೋವರೆಗೂ ದರ್ಶನ್ ನನ್ನ ಮಗ’ ಎಂದಿದ್ದಾರೆ.

‘ನನ್ನ ಕೊನೆಯ ಉಸಿರು ಇರುವವರೆಗೂ ದರ್ಶನ್​ ನನ್ನ ಮಗನೇ. ದರ್ಶನ್​ನ ಗುರಿಯಾಗಿಸಿಕೊಂಡು ನಾನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿಲ್ಲ. ದರ್ಶನ್​ ಇನ್​ಸ್ಟಾಗ್ರಾಂನಲ್ಲಿ ಯಾರನ್ನೂ ಸಹ ಫಾಲೋ ಮಾಡುತ್ತಿಲ್ಲ. ವಿನೀಶ್​ನನ್ನು ಕೂಡ ಅನ್​​ಫಾಲೋ ಮಾಡಿದ್ದಾರೆ’ ಎಂದಿದ್ದಾರೆ ಸುಮಲತಾ.

‘ನನ್ನ ಸಾಮಾಜಿಕ ಖಾತೆಯಲ್ಲಿ ದರ್ಶನ್​ನ ಫಾಲೋ ಮಾಡ್ತಿದ್ದೇನೆ. ನಾನು ಯಾರನ್ನೋ ಗುರಿಯಾಗಿಸಿ ಪೋಸ್ಟ್ ಮಾಡಿರಲಿಲ್ಲ. ನಾನು ಹಾಕಿದ್ದ ಪೋಸ್ಟ್​ಗೂ ದರ್ಶನ್​ಗೂ ಸಂಬಂಧವಿಲ್ಲ. ಇದೊಂದು ಸಿಲ್ಲಿ ವಿಚಾರ ಎಂದು ನನಗೆ ಅನಿಸುತ್ತದೆ. ನಮ್ಮ ಪ್ರೀತಿ ವಿಶ್ವಾಸದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನನ್ನ ಜೀವನದಲ್ಲಿ ಋಣಾತ್ಮಕ ಚಿಂತನೆಗಳಿಗೆ ಜಾಗವಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದವರಿಗೂ ಒಳ್ಳೆಯದಾಗಲಿ ಎಂದು ಬಯಸುವವನು ನಾನು. ನಮ್ಮ ಮನೆಯಲ್ಲಿ ದರ್ಶನ್ ಇಲ್ಲದೆ ಯಾವ ಕಾರ್ಯಕ್ರಮ ನಡೆಯಲ್ಲ’ ಎಂದು ಅವರು ಹೇಳಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow