ಹೆಂಗಸರು ಮನೆಲಿ ಇರದೇ ಬೀದಿ ಸುತ್ತುವ ಹಾಗೇ ಮಾಡಿದ್ದೆ ಸಿದ್ದರಾಮಯ್ಯ: ನಾಲಿಗೆ ಹರಿಬಿಟ್ಟ ಮಹಿಳಾ ಅಧಿಕಾರಿ

ತುಮಕೂರು: ಪಾವಗಡ ಸಬ್ ರಿಜಿಸ್ಟರ್ ರಾಧಮ್ಮ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಡಿದ ವಿವಾದಿತ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ರಾಧಮ್ಮ ಅವರು “ಕಾಂಗ್ರೆಸ್ ಏನ್ ದಬಾಕಿರೋದು? ಗಾಂಧೀಜಿ ಹೆಂಡತಿ ಮುಸ್ಲಿಂ, ಇಂದಿರಾಗಾಂಧಿ ಗಂಡ ಮುಸ್ಲಿಂ…” ಎಂದು ಹೇಳಿದ್ದು, ಇದಕ್ಕೆ ರೈತರ ಸಂಘದಿಂದ ಆಕ್ರೋಶ ವ್ಯಕ್ತವಾಗಿದೆ.
"ನಮಗೆ ಕುಡಿಯೋಕೆ ನೀರು ಸಿಗ್ತಿರಲಿಲ್ಲ, ಸಿದ್ದರಾಮಯ್ಯ ತಾವೇ ಹೆಣ್ಣು ಮಕ್ಕಳಿಗೆ ಎಲ್ಲಾ ಕೊಡ್ತಾರೆ, ತರಕಾರಿ, ಹಣ್ಣು, ಹಾಲು, ಬಿಸ್ಕೆಟ್—ಎಲ್ಲಾ ಬೆಳೆ ಕಾಳುಗಳನ್ನು ಒಂದೇ ಹಂತದಲ್ಲಿ ಹೆಚ್ಚಿಸಿದ್ದಾರೆ!" ಎಂದು, ಸಿಎಂ ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆ ಮತ್ತು ರೈತರ ಸಹಾಯ ಕಾರ್ಯಗಳನ್ನು ಟೀಕಿಸಿದ್ದಾರೆ.
ಈ ಹೇಳಿಕೆಗೆ ರೈತ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರೈತ ಸಂಘದ ಕಾರ್ಯಕರ್ತರು, “ರಾಧಮ್ಮ ಅವರು ಲಂಚವಿಲ್ಲದೆ ಕೆಲಸ ಮಾಡುವುದಿಲ್ಲ. ಅವರು ಗ್ಯಾರಂಟಿ ಯೋಜನೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಬೇಕು,” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






