Virat Kohli: ಸುಖಾಸುಮ್ಮನೆ ವಿರಾಟ್ ಕಿರಿಕ್: ಬ್ಯಾನ್​ ಶಿಕ್ಷೆಯಿಂದ ಜಸ್ಟ್ ಮಿಸ್!

ಡಿಸೆಂಬರ್ 27, 2024 - 09:24
 0  11
Virat Kohli: ಸುಖಾಸುಮ್ಮನೆ ವಿರಾಟ್ ಕಿರಿಕ್: ಬ್ಯಾನ್​ ಶಿಕ್ಷೆಯಿಂದ ಜಸ್ಟ್ ಮಿಸ್!

ಮೆಲ್ಬೋರ್ನ್​​ನಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಬ್ಯಾಟಿಂಗ್ ಮಾಡ್ತಿರುವ ಆಸ್ಟ್ರೇಲಿಯಾದ ಬ್ಯಾಟರ್ ಎದೆಗೆ ಕೊಹ್ಲಿ ಡಿಚ್ಚಿ ಹೊಡೆದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಕೊಹ್ಲಿಗೆ ದಂಡ ವಿಧಿಸಲಾಗಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಅದರಂತೆ ಮೊದಲ ಇನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ತಂಡಕ್ಕೆ ಯುವ ದಾಂಡಿಗ ಸ್ಯಾಮ್ ಕೊನ್​ಸ್ಟಾಸ್ ಸ್ಪೋಟಕ ಆರಂಭ ಒದಗಿಸಿದ್ದರು.

ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ ಚೊಚ್ಚಲ ಪಂದ್ಯದಲ್ಲೇ ಕೇವಲ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.
ಇತ್ತ ಸ್ಯಾಮ್ ಕೊನ್​ಸ್ಟಾಸ್ ಅಬ್ಬರದಿಂದಾಗಿ ಆರಂಭದಲ್ಲೇ ಟೀಮ್ ಇಂಡಿಯಾ ಬೌಲರ್​​ಗಳು ಹೈರಾಣರಾದರು. ಇದರ ನಡುವೆ ವಿರಾಟ್ ಕೊಹ್ಲಿ ಯುವ ದಾಂಡಿಗನನ್ನು ಕೆಣಕುವ ಕಾಯಕಕ್ಕೆ ಕೈ ಹಾಕಿದರು.

ವಿವಾದ ಬೆನ್ನಲ್ಲೇ ಕೊಹ್ಲಿ ಜೊತೆಗೆ ಮ್ಯಾಚ್​ ರೆಫ್ರಿ ​ 10 ನಿಮಿಷಗಳ ಮೀಟಿಂಗ್ ನಡೆಸಿದರು. ಈ ವೇಳೆ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ ಕೌನ್ಸಿಲ್ ಕೋಡ್​ನ ನಿಯಮ ಉಲ್ಲಂಘನೆ ಮಾಡಿರೋದನ್ನು ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ Level 1 ಆರೋಪ ಹೊರಿಸಲಾಗಿದೆ. ಮೈದಾದನದಲ್ಲಿ ಎದುರಾಳಿ ಆಟಗಾರನಿಗೆ ಸಣ್ಣ ಪ್ರಮಾಣದಲ್ಲಿ ಟಚ್ ಮಾಡಿದ ಆರೋಪ ಹೊರಿಸಲಾಗಿದೆ.

ಆಸಿಸ್​ ಓಪ್ನಿಂಗ್ ಬ್ಯಾಟರ್​​ ಸ್ಯಾಮ್ ಕಾನ್​ಸ್ಟೊಸ್​ ಎದೆಗೆ ಡಿಚ್ಚಿ ಕೊಟ್ಟ ವಿವಾದದಲ್ಲಿ ಕಿಂಗ್ ಕೊಹ್ಲಿ ಬ್ಯಾನ್ ಆಗುವ ಆತಂಕದಿಂದ ದೂರ ಆಗಿದ್ದಾರೆ. ಆದರೆ ಐಸಿಸಿ ಭಾರೀ ದಂಡ ವಿಧಿಸಿ ಖಡಕ್ ಎಚ್ಚರಿಕೆ ನೀಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow