15 ತಿಂಗಳ ನಂತರ ವಿದೇಶ ಪ್ರವಾಸ: “ಡೆವಿಲ್” ಸಾಂಗ್ ಶೂಟಿಂಗ್ಗಾ’ಗಿ ಪುಕೇಟ್’ನಲ್ಲಿ ದರ್ಶನ್

ನಟ ದರ್ಶನ್, 15 ತಿಂಗಳ ಬಳಿಕ ಮತ್ತೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. "ಡೆವಿಲ್" ಚಿತ್ರದ ಹಾಡು ಶೂಟಿಂಗ್ಗಾಗಿ ಅವರು ಈಗ ಥೈಲ್ಯಾಂಡ್ನ ಪುಕೇಟ್ಗೆ ತೆರಳಿದ್ದಾರೆ.
ಈ ಹಾಡಿನ ಶೂಟಿಂಗ್ ವೇಳೆ ದರ್ಶನ್ ಉತ್ಸಾಹದಿಂದ ಭಾಗವಹಿಸುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವುಗಳಲ್ಲಿ ಫಾರೆನ್ ಯುವತಿಯರ ಜೊತೆ ಅವರು ಪೋಸ್ ನೀಡಿರುವ ದೃಶ್ಯಗಳು ವಿಶೇಷ ಗಮನ ಸೆಳೆಯುತ್ತಿವೆ.
ಕೊಲೆ ಆರೋಪದ ಸಂಬಂಧ ಕಳೆದ ವರ್ಷ (2024ರ) ಜೂನ್ ತಿಂಗಳಲ್ಲಿ ಜೈಲಿಗೆ ಸೇರಿದ್ದ ದರ್ಶನ್, ನಂತರ ಜಾಮೀನಿನಲ್ಲಿ ಹೊರಬಂದಿದ್ದರು. ಇದೀಗ ಅವರು ಪುನಃ ಚಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, "ಡೆವಿಲ್" ಶೂಟಿಂಗ್ನೊಂದಿಗೆ ತಮ್ಮ ಚಲನಚಿತ್ರ ಚಟುವಟಿಕೆ ಮುಂದುವರಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






