17,000 ಉದ್ಯೋಗಿಗಳ ವಜಾಗೆ ಮುಂದಾದ ಬೋಯಿಂಗ್ ಕಂಪನಿ! ಯಾಕೆ ಗೊತ್ತಾ..?

ನವೆಂಬರ್ 17, 2024 - 14:00
 0  10
17,000 ಉದ್ಯೋಗಿಗಳ ವಜಾಗೆ ಮುಂದಾದ ಬೋಯಿಂಗ್ ಕಂಪನಿ! ಯಾಕೆ ಗೊತ್ತಾ..?

ಬೆಂಗಳೂರು: ವೈಮಾನಿಕ ಕ್ಷೇತ್ರದ ಜಾಗತಿಕ ಮುಂಚೂಣಿ ಕಂಪನಿ ಅಮೆರಿಕಾದ ಬೋಯಿಂಗ್‌ ಸಂಸ್ಥೆಯು ತನ್ನ ಹೊಸ ಬೋಯಿಂಗ್‌ ಇಂಡಿಯಾ ಉದ್ಯೋಗಿಗಳಿಗೆ ಶಾಕ್‌ ನೀಡಲು ಮುಂದಾಗಿದೆ. ಹೌದು ತನ್ನ ಕಂಪನಿಯಿಂದ 17,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾಗಿದೆ. ಈ ನಿರ್ಧಾರದ ಬೆನ್ನಲ್ಲೇ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ಕಳುಹಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಜಾಗತಿಕಮಟ್ಟದಲ್ಲಿ ಇರುವ ಒಟ್ಟು ಉದ್ಯೋಗಿಗಳ ಪೈಕಿ 10%ನಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗುವುದು. ಕಂಪನಿಯ ದಕ್ಷತೆ ಹೆಚ್ಚಿಸಲು ಹಾಗೂ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಸಕ್ತ ವರ್ಷದ ಆರಂಭದಿಂದಲೂ ಬೋಯಿಂಗ್ ಕಂಪನಿ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಮೆರಿಕದಲ್ಲಿ 33,000 ಉದ್ಯೋಗಿಗಳು ಹಲವು ವಾರಗಳವರೆಗೆ ಪ್ರತಿಭಟನೆ ನಡೆಸಿದ್ದರು. ಇದರಿಂದ ಕಂಪನಿಯ ವಾಣಿಜ್ಯ ವಿಮಾನಗಳ ತಯಾರಿಕೆಗೆ ಪೆಟ್ಟು ಬಿದ್ದಿತ್ತು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow