35 ವರ್ಷದ ಮಹಿಳೆಯನ್ನ ಮದುವೆಯಾದ 75ರ ವೃದ್ಧ: ಮೊದಲ ರಾತ್ರಿಗೂ ಮೊದಲೇ ಸಾವು!

ಅಕ್ಟೋಬರ್ 1, 2025 - 22:01
ಅಕ್ಟೋಬರ್ 1, 2025 - 22:02
 0  12
35 ವರ್ಷದ ಮಹಿಳೆಯನ್ನ ಮದುವೆಯಾದ 75ರ ವೃದ್ಧ: ಮೊದಲ ರಾತ್ರಿಗೂ ಮೊದಲೇ ಸಾವು!

ಉತ್ತರ ಪ್ರದೇಶ: 75 ವರ್ಷದ ವೃದ್ಧನೊಬ್ಬ 35 ವರ್ಷದ ಮಹಿಳೆಯನ್ನು ಮದುವೆಯಾದ ಮರುದಿನವೇ ಸಾವನ್ನಪ್ಪಿದ ಘಟನೆ ಜೌನ್ಪುರ್ ಜಿಲ್ಲೆಯ ಕುಚ್‌ಮುಚ್ ಗ್ರಾಮದಲ್ಲಿ ನಡೆದಿದೆ.ಸಂಗ್ರೂರಮ್ (75) ಎಂಬ ವೃದ್ಧ, ಒಂದು ವರ್ಷದ ಹಿಂದೆ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದ. ಮನೆಯವರ ವಿರೋಧವಿದ್ದರೂ, ಸೆಪ್ಟೆಂಬರ್ 29ರಂದು ಜಲಾಲ್‌ಪುರದ ನಿವಾಸಿ ಮಾಂಭಾವತಿ (35) ಅವರನ್ನು ಮದುವೆಯಾಗಿದ್ದರು.

ಮೊದಲಿಗೆ ರಿಜಿಸ್ಟರ್ ಮ್ಯಾರೇಜ್ ಮಾಡಿ, ನಂತರ ದೇವಾಲಯದಲ್ಲೂ ಸಂಪ್ರದಾಯಬದ್ಧವಾಗಿ ವಿವಾಹ ನೆರವೇರಿಸಿದ್ದರು. ಮದುವೆಯ ರಾತ್ರಿ ಪತ್ನಿ ಮಾಂಭಾವತಿ, “ಮನೆ ಹಾಗೂ ಮಕ್ಕಳ ಜವಾಬ್ದಾರಿಯನ್ನು ನಾನು ನೋಡಿಕೊಳ್ಳುತ್ತೇನೆ” ಎಂದು ಹೇಳಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಆದರೆ ಬೆಳಗ್ಗೆ ಸಂಗ್ರೂರಮ್ ಅವರ ಆರೋಗ್ಯ ಏಕಾಏಕಿ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಅಕಾಲಿಕ ಸಾವು ಗ್ರಾಮದಲ್ಲಿ ಆತಂಕ ಹಾಗೂ ಅನುಮಾನಗಳಿಗೆ ಕಾರಣವಾಗಿದೆ. ಕೆಲವರು ಇದನ್ನು ಸಹಜ ಸಾವೆಂದು ಹೇಳಿದರೆ, ಇನ್ನು ಕೆಲವರು ಅನುಮಾನ ವ್ಯಕ್ತಪಡಿಸಿ ಪೊಲೀಸ್ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow