5 ವರ್ಷಗಳ ಕಾಲ ನಾನೇ ಸಿಎಂ: ಇರಲ್ಲ ಅನ್ನೋಕೆ ಅಶೋಕ್ ಏನು ಹೈಕಮಾಂಡಾ?: ಸಿದ್ದರಾಮಯ್ಯ

5 ವರ್ಷಗಳ ಕಾಲ ನಾನೇ ಸಿಎಂ: ಇರಲ್ಲ ಅನ್ನೋಕೆ ಅಶೋಕ್ ಏನು ಹೈಕಮಾಂಡಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಂದಿಬೆಟ್ಟದಲ್ಲಿ ನಡೆದ ಸಂಪುಟ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ಟೆಂಬರ್ನಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿಗರ ಮಾತುಗಳಿಗೆ ಉತ್ತರಿಸುತ್ತಾ,
"ಬಿಜೆಪಿಯವರು ಶುದ್ಧ ಸುಳ್ಳು ಹೇಳುತ್ತಾರೆ. ನಾನು ಈಗಾಗಲೇ ಮೈಸೂರಿನಲ್ಲಿ ಹೇಳಿದ್ದೇನೆ. ನಮ್ಮ ಸರ್ಕಾರ ಬಂಡೆಯಂತೆ ದೃಢವಾಗಿ ಇರಲಿದೆ. ನಾವೆಲ್ಲರೂ ಒಗ್ಗಟ್ಟಿನಲ್ಲಿ ಇದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಅವರು ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅವರ ಸೇವೆ ಏನೆಂಬುದನ್ನು ಅವರೇ ತಿಳಿಸಲಿ. ಮೊದಲು ಬಿಜೆಪಿಯವರು ಹಗಲು ಕನಸು ಕಾಣುವುದನ್ನು ಬಿಡಲಿ" ಎಂದರು.
ರಾಜ್ಯದ ಪ್ರತೀ ಡಿವಿಷನ್ಗಳಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿದ್ದೇವೆ. ಅಂತೆಯೇ ಇಂದು ಬೆಂಗಳೂರು ವಿಭಾಗದ ಸಚಿವ ಸಂಪುಟ ಸಭೆ ನಡೆಸುತ್ತಿದ್ದೇವೆ. ಈ ಸಭೆ ಕೇವಲ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಸೀಮಿತವಲ್ಲ. ಬೆಂಗಳೂರು ವಿಭಾಗದ ಎಲ್ಲಾ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು" ಎಂದು ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






