6 ತಿಂಗಳ ಬಳಿಕ ದರ್ಶನ್-ಪವಿತ್ರಾ ಮುಖಾಮುಖಿ: “ದಾಸ”ನ ನೋಡಿ ಪವಿತ್ರಾ ಎಮೋಷನಲ್!

ಜನವರಿ 10, 2025 - 12:19
 0  16
6 ತಿಂಗಳ ಬಳಿಕ ದರ್ಶನ್-ಪವಿತ್ರಾ ಮುಖಾಮುಖಿ: “ದಾಸ”ನ ನೋಡಿ ಪವಿತ್ರಾ ಎಮೋಷನಲ್!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನ ವಿಚಾರಣೆಗೆ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 17 ಜನರು ಹಾಜರಾಗಿದ್ದರು. ಜಾಮೀನು ನೀಡುವ ಸಮಯದಲ್ಲಿ ಪ್ರತಿ ತಿಂಗಳು ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು.

ಅದರಂತೆ ಶುಕ್ರವಾರ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಆಗಲು‌ ದಿನಾಂಕ ನಿಗಧಿ ಮಾಡಲಾಗಿತ್ತು. ಹಾಗಾಗಿ ಇಂದು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. 

ಈ ವೇಳೆ ದರ್ಶನ್ ನೋಡಿ ಪವಿತ್ರಾಗೌಡ ಭಾವುಕರಾಗಿ ಕಣ್ಣೀರು ಹಾಕಿದ್ದು ದರ್ಶನ್ ಮಾತನಾಡಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಅದಲ್ಲದೆ ಗ ನಟ ದರ್ಶನ್ ಸ್ವತಃ ಗೆಳತಿ ಪವಿತ್ರಾಗೌಡ ಬಳಿ ಹೋಗಿ ಬೆನ್ನು ತಟ್ಟಿ ಸಂತೈಸಿದರು. ಫೆ. 25ಕ್ಕೆ ವಿಚಾರಣೆ ಮುದೂಡಿಕೆ ಮಾಡಿದರು.

ಕೋರ್ಟ್ ಹಾಲ್‌ನಲ್ಲಿ ದರ್ಶನ್ ಪವಿತ್ರಾಗೌಡ ಮಾತುಕತೆ ಮಾಡಿದರು. ಸದ್ಯ ಈ ಒಂದು ಕೇಸ್​ನಲ್ಲಿ ವಿಚಾರಣೆಯನ್ನು ಮುಂದೂಡಲಾಗಿದ್ದು ಫೆಬ್ರವರಿ 25ಕ್ಕೆ ವಿಚಾರಣೆಗೆ ಹಾಜರಾಗಲು ಕೋರ್ಟ್ ನಿರ್ದೇಶಿಸಿದೆ. ಆರೋಪಿಗಳಾದ 15 ಮತ್ತು 17 ಶ್ಯೂರಿಟಿ ಕೊಡಲು ಸೂಚನೆ ನೀಡಲಾಗಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow