8 ವರ್ಷಗಳ ನಂತರ ಸ್ಯಾಂಡಲ್ ವುಡ್ʼಗೆ ಮರಳಿದ ನಟಿ ಅಮೂಲ್ಯ! ‘ಪೀಕಬೂ’ ಟೀಸರ್ ರಿಲೀಸ್

ಸೆಪ್ಟೆಂಬರ್ 14, 2025 - 22:08
 0  16
8 ವರ್ಷಗಳ ನಂತರ ಸ್ಯಾಂಡಲ್ ವುಡ್ʼಗೆ ಮರಳಿದ ನಟಿ ಅಮೂಲ್ಯ! ‘ಪೀಕಬೂ’ ಟೀಸರ್ ರಿಲೀಸ್

ಕನ್ನಡ ಚಿತ್ರರಂಗದ ಹಿರಿಯ ನಟಿ ಅಮೂಲ್ಯ ಮದುವೆಯ ನಂತರ 8 ವರ್ಷಗಳ ಕಾಲ ನಟನೆಯಿಂದ ದೂರವಾಗಿದ್ದರು. ಇದೀಗ ಅವರು ಹೊಸ ಸಿನಿಮಾ ‘ಪೀಕಬೂ’ ಮೂಲಕ ನಾಯಕಿಯಾಗಿ ಮರುಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರವನ್ನು ‘ಶ್ರಾವಣಿ ಸುಬ್ರಮಣ್ಯ’ ಚಿತ್ರದ ಖ್ಯಾತಿಯ ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶಿಸುತ್ತಿದ್ದಾರೆ. ಹೊಸ ಸಿನಿಮಾಗೆ ಅವರು ಸಹಿ ಹಾಕಿದ್ದಾರೆ. ವಿಶೇಷ ಏನೆಂದರೆ, ಇಂದು ಅಮೂಲ್ಯ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಹೊಸ ಸಿನಿಮಾ ‘ಪೀಕಬೂ’ ಸಿನಿಮಾ ಅನೌನ್ಸ್‌ ಆಗಿದೆ.

ಚಿಕ್ಕದಾದ ಟೀಸರ್‌ ಮೂಲಕ ಅಮೂಲ್ಯ ಅವರ ರೀ ಎಂಟ್ರಿಗೆ ಸಿನಿಮಾ ತಂಡ ಸ್ವಾಗತ ಕೋರಿದೆ. ಕಮ್‌ ಬ್ಯಾಕ್‌ ಸಿನಿಮಾ ಸಲುವಾಗಿ ಅಮೂಲ್ಯ ಅವರು ಸಂಪೂರ್ಣ ತಯಾರಾಗಿದ್ದಾರೆ. ಮೊದಲಿನಂತೆ ಅವರು ಕಾಣುತ್ತಿದ್ದಾರೆ. ಡ್ಯಾನ್ಸ್‌ ಮಾಡುತ್ತಾ, ಟೀಸರ್​​ನಲ್ಲಿ ಎನರ್ಜಿ ತೋರಿಸಿದ್ದಾರೆ. ವಿ. ನಾಗೇಂದ್ರ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಅಮೂಲ್ಯ ಅವರ ಹೊಸ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.

ನಿರ್ದೇಶಕ ಮಂಜು ಸ್ವರಾಜ್‌ ಅವರು ‘ಪೀಕಬೂ’ ಎಂಬ ಶೀರ್ಷಿಕೆ ಮೂಲಕ ಕುತೂಹಲ ಹುಟ್ಟಿಸಲು ಪ್ರಯತ್ನಿಸಿದ್ದಾರೆ. ಪೀಕಬೂ ಎಂದರೆ ಮಕ್ಕಳನ್ನ ನಗಿಸಲು ಬಳಸುವ ಪದ ಎಂದು ಚಿತ್ರತಂಡ ಹೇಳಿದೆ. ಒಂದೊಳ್ಳೆ ಮೆಸೇಜ್‌ ಹಾಗೂ ಕಮರ್ಷಿಯಲ್‌ ಅಂಶಗಳು ಈ ಸಿನಿಮಾದಲ್ಲಿ ಇರಲಿವೆಯಂತೆ. ಈಗ ಹೀರೋಯಿನ್‌ ಎಂಟ್ರಿ ಸಲುವಾಗಿ ಟೀಸರ್‌ ಬಿಡುಗಡೆ ಮಾಡಿರುವ ಚಿತ್ರತಂಡದವರು ಶೀಘ್ರದಲ್ಲೇ ಚಿತ್ರೀಕರಣ ಆರಂಭ ಮಾಡಲಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow