Actor Darshan: ನಟ ದರ್ಶನ್ ಜತೆ ದೇವಸ್ಥಾನದಲ್ಲಿ ಜೊತೆಗಿದ್ದ ಕೊಲೆ ಆರೋಪಿ ಪ್ರಜ್ವಲ್ ರೈ..!

ನಟ ದರ್ಶನ್ ಅವರು ಕೇರಳದ ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ದರ್ಶನ್ ಇತ್ತೀಚೆಗೆ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಈ ಹಿಂದೆಯೂ ಸಹ ಚಾಮುಂಡೇಶ್ವರಿ ದೇವಾಲಯ, ತಮಿಳುನಾಡಿನ ಕೆಲ ದೇವಾಲಯಗಳು, ಇತ್ತೀಚೆಗೆ ಗೌಡಗೆರೆ ಚಾಮುಂಡೇಶ್ವರಿ ದೇವಾಲಯ ಹೀಗೆ ಹಲವು ದೇವಾಲಯಗಳಿಗೆ ಭೇಟಿ ಮಾಡಿದ್ದಿದೆ.
ಆದರೆ ಈ ದೇವಾಲಯಕ್ಕೆ ಅವರು ಪುತ್ರ ವಿನೀಶ್ ಮತ್ತು ಧನ್ವೀರ್ ಗೌಡ ಜೊತೆಗೆ ಹೋಗಿದ್ದರು. ಆದರೆ ಇವರ ಜೊತೆಗೆ ಮತ್ತೊಬ್ಬ ಕೊಲೆ ಆರೋಪಿಯೂ ಇದ್ದರು ಎಂದು ತಿಳಿದು ಬಂದಿದೆ. ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯದಲ್ಲಿ ದರ್ಶನ್, ವಿನೀಶ್ ಮತ್ತು ಧನ್ವೀರ್ ಮಾತ್ರವೇ ಇರಲಿಲ್ಲ. ಅವರೊಟ್ಟಿಗೆ ಪ್ರಜ್ವಲ್ ರೈ ಎಂಬಾತನೂ ಇದ್ದ. ಈತನೂ ಸಹ ದರ್ಶನ್ ರೀತಿಯಲ್ಲಿಯೇ ಕುಖ್ಯಾತ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ.
2017 ರ ಕರೋಪಾಡಿ ಜಲೀಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಪ್ರಜ್ವಲ್ ರೈ. ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಜಲೀಲ್ ಕೊಲೆ ಪ್ರಕರಣ ಆಗ ಸಂಚಲನ ಸೃಷ್ಟಿಸಿತ್ತು. ಆ ಕೊಲೆ ಪ್ರಕರಣದಲ್ಲಿ ಒಟ್ಟು 11 ಜನರ ಬಂಧನವಾಗಿತ್ತು, ಅದರಲ್ಲಿ ಪ್ರಜ್ವಲ್ ರೈ ಸಹ ಒಬ್ಬ. ಈಗ ಇದೇ ಪ್ರಜ್ವಲ್ ರೈ, ದರ್ಶನ್ ಅವರನ್ನು ಕೇರಳದ ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದರು ಎನ್ನಲಾಗುತ್ತಿದೆ.
ಪುತ್ತೂರಿನಲ್ಲಿ ಕೆಲ ಗೆಳೆಯರನ್ನು ಹೊಂದಿರುವ ನಟ ದರ್ಶನ್, ಅವರ ಮಾರ್ಗದರ್ಶನದಂತೆಯೇ ಕಣ್ಣೂರಿನ ಮಾಡಾಯಿಕಾವು ಭದ್ರಕಾಳಿ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






