BBK11: ಇಂದು ಕಿಚ್ಚನ ಪಂಚಾಯಿತಿ: ಈ ವಾರ ಬಿಗ್ ಮನೆಯಿಂದ ಹೊರ ಹೋಗೋದು ಯಾರು!?

ನವೆಂಬರ್ 30, 2024 - 19:14
 0  9
BBK11: ಇಂದು ಕಿಚ್ಚನ ಪಂಚಾಯಿತಿ: ಈ ವಾರ ಬಿಗ್ ಮನೆಯಿಂದ ಹೊರ ಹೋಗೋದು ಯಾರು!?

ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದ್ದ ಬಿಗ್ ಮನೆಯಲ್ಲಿ ಈ ಸಾಕಷ್ಟು ಚರ್ಚೆಗಳು ಕಿಚ್ಚನ ಮುಂದೆ ಬರಲಿದೆ. ಈ ವಾರ ಯಾರಿಗೆ ಕಿಚ್ಚನ ಕ್ಲಾಸ್, ಯಾರಿಗೆ ಶಹಬ್ಬಾಸ್ ಗಿರಿ ಎಂಬುವುದನ್ನು ಇಂದಿನ ಕಿಚ್ಚನ ಪಂಚಾಯಿತಿ ಸಂಚಿಕೆಯಲ್ಲೇ ಕಾದು ನೋಡಬೇಕು. 

ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದಾರೆ. ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ಶಿಶಿರ್, ಭವ್ಯ, ಚೈತ್ರಾ, ತ್ರಿವಿಕ್ರಮ್ ಹಾಗೂ ಐಶ್ವರ್ಯ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರಿಗೆ ಬಿಗ್​ಬಾಸ್​ ಜರ್ನಿ ಅಂತ್ಯಗೊಳ್ಳಲಿದೆ.

ಕಿಚ್ಚನ ಪಂಚಾಯ್ತಿಯಲ್ಲಿ ಯಾವೆಲ್ಲ ವಿಚಾರಗಳು ಚರ್ಚೆಗೆ ಬರಲಿದೆ ಅನ್ನೋದ್ರ ಬಗ್ಗೆಯೂ ಕುತೂಹಲ ಮೂಡಿಸಿದೆ. ಉಗ್ರಂ ಮಂಜು ಬಿಗ್​ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದರು. ಅವರ ಕ್ಯಾಪ್ಟನ್ಸಿ ಅವಧಿಯಲ್ಲಿ ಮಹಾರಾಜರಾಗಿ ಬಡ್ತಿ ಪಡೆದಿದ್ದ ಮಂಜಣ್ಣ ರಾಜ ದರ್ಬಾರ್​ ಜೋರಾಗಿ ನಡೆಸಿದ್ದಾರೆ. ಟಾಸ್ಕ್​​ ವೇಳೆ ನಡೆದ ಮಾತಿನ ಯುದ್ಧಗಳು, ಸರಿ ತಪ್ಪುಗಳ ಕಿತ್ತಾಟ, ಭಾವನೆಗಳ ಜೊತೆಗಿನ ಕಣ್ಣೀರನ ಬಗ್ಗೆ ಸುದೀಪ್ ಚರ್ಚೆ ನಡೆಸುವ ಸಾಧ್ಯತೆ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow