ಇಲಿ ಜ್ವರ: ಬಿಮ್ಸ್ ಗೆ ದಾಖಲಾಗಿದ್ದ 7 ಮಂದಿ ಗರ್ಭಿಣಿಯರಲ್ಲಿ ಮೂವರಿಗೆ ಸೋಂಕು!

ನವೆಂಬರ್ 30, 2024 - 14:03
 0  9
ಇಲಿ ಜ್ವರ: ಬಿಮ್ಸ್ ಗೆ ದಾಖಲಾಗಿದ್ದ 7 ಮಂದಿ ಗರ್ಭಿಣಿಯರಲ್ಲಿ ಮೂವರಿಗೆ ಸೋಂಕು!

ಬಳ್ಳಾರಿ:- ಬಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಏಳು ಮಂದಿ ಗರ್ಭಣಿಯರಲ್ಲಿ ನಾಲ್ವರು ಮೃತಪಟ್ಟಿದ್ದು, ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಸದ್ಯ ಆಸ್ಪತ್ರೆಯಿಂದ ಇಬ್ಬರು ಡಿಸ್ಚಾರ್ಜ್ ಆಗಿದ್ದು, ಓರ್ವ ಬಾಣಂತಿಗೆ ಚಿಕಿತ್ಸೆ ಮುಂದುವರೆದಿದೆ. 

ಈ ಬಗ್ಗೆ ಬಿಮ್ಸ್ ನಿರ್ದೇಶಕ ಡಾ.‌ಗಂಗಾಧರ್ ಗೌಡ ಮಾಹಿತಿ ಕೊಟ್ಟಿದ್ದಾರೆ. ಏಳೂ ಮಂದಿ ಗರ್ಭಣಿಯರಿಗೆ ನವೆಂಬರ್​ 9 ರಂದು ಸಿಸೇರಿಯನ್ ಮಾಡಲಾಗಿತ್ತು. ಸಿಸೇರಿಯನ್ ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಆರೋಗ್ಯದಲ್ಲಿನ ಏರುಪೇರಿಂದ ನಾಲ್ವರು ಬಾಣಂತಿಯರು ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಇಲಿ ಜ್ವರದಿಂದ ಇಬ್ಬರು ಗುಣಮುಖರಾಗಿದ್ದು, ಒಬ್ಬರಿಗೆ ಚಿಕಿತ್ಸೆ ಮುಂದೆವರೆದಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow