ಬೆಂಗಳೂರಿನಿಂದ ತುಮಕೂರಿಗೆ ವಿಸ್ತರಣೆ ಆಗುತ್ತಾ ಮೆಟ್ರೋ!? ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು!?

ಡಿಸೆಂಬರ್ 1, 2024 - 15:41
 0  8
ಬೆಂಗಳೂರಿನಿಂದ ತುಮಕೂರಿಗೆ ವಿಸ್ತರಣೆ ಆಗುತ್ತಾ ಮೆಟ್ರೋ!? ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು!?

ತುಮಕೂರು:- ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ವಿಸ್ತರಣೆ ಕುರಿತು ಗೃಹ ಸಚಿವ ಪರಮೇಶ್ವರ್ ಬಿಗ್ ಅಪ್ ಡೇಟ್ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಈ ಬಗ್ಗೆ ವಿಸ್ತೃತ ಯೋಜನಾ ನಡೆಯುತ್ತಿದೆ. ಹೈದರಾಬಾದ್​ ಮೂಲದ ಕಂಪನಿ ಡಿಪಿಆರ್ ತಯಾರಿ ಮಾಡುತ್ತಿದೆ.

ಡಿಪಿಆರ್ ಆದ ಬಳಿಕ ಎಸ್​ಪಿಪಿ ಮಾಡಿ ಸರ್ಕಾರದ ಮುಂದೆ ವರದಿ ಇಡಲಾಗುತ್ತದೆ ಎಂದು ತಿಳಿಸಿದರು ವಸಂತನರಸಾಪುರದಲ್ಲಿ ಟೌನ್​ಶಿಪ್ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಜಾಗ ಗುರುತಿಸಲಾಗಿದೆ. ಪಿಪಿಪಿ ಮಾಡೆಲ್​ನಲ್ಲಿ ಟೌನ್​ಶಿಫ್ ನೀಡಲಾಗುತ್ತದೆ. ಇನ್ನು, ನಮ್ಮ ‌ಜಿಲ್ಲೆಯಲ್ಲಿ‌ ವಿಮಾನ ನಿಲ್ದಾಣ ನಿರ್ಮಾಣ ಬಗ್ಗೆ ಚರ್ಚೆ ಇಲ್ಲ. ದಾಬಸ್ ಪೆಟೆ ನೆಲಮಂಗಲ ಬಳಿ ನಿರ್ಮಾಣ ಮಾಡಲು ಚರ್ಚೆ ನಡೆಯುತ್ತಿದೆ ಎಂದರು.

ಇನ್ನೂ 52.41 ಕಿ.ಮೀ. ಉದ್ದದ ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಮಾರ್ಗದಲ್ಲಿ 19 ಎತ್ತರದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಮಾದಾವರ ನಿಲ್ದಾಣದಿಂದ ಪ್ರಾರಂಭವಾಗುವ ಮೆಟ್ರೋ ಮಾರ್ಗವು ತುಮಕೂರು ಬಸ್ ನಿಲ್ದಾಣದವರೆಗೆ ವಿಸ್ತರಿಸುವ ಗುರಿ ಹೊಂದಿದೆ. ಬಹು ನಿರೀಕ್ಷಿತ ಈ ಯೋಜನೆಯು ತುಮಕೂರು ಬೆಂಗಳೂರು ನಡುವಿನ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಸುಲಭವಾಗಿಸಲಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow