AFMS Recruitment : ಭಾರತೀಯ ಸೇನೆಯಲ್ಲಿ ವೈದ್ಯರಾಗಲು ಸುವರ್ಣ ಅವಕಾಶ! ಇಂದೇ ಅರ್ಜಿ ಸಲ್ಲಿಸಿ
ನವದೆಹಲಿ: ಭಾರತೀಯ ಸೇನಾ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು (AFMS) ವೈದ್ಯಕೀಯ ಅಧಿಕಾರಿಗಳ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು 225 ಹುದ್ದೆಗಳು ಖಾಲಿ ಇದ್ದು, ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 3 ಎಂದು ತಿಳಿಸಲಾಗಿದೆ. ಅರ್ಜಿಗಳನ್ನು ಕೇವಲ join.afms.gov.in ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಸಲ್ಲಿಸಬಹುದು.
ಹುದ್ದೆಗಳ ವಿವರ
-
ಒಟ್ಟು ಹುದ್ದೆಗಳು: 225
-
ಪುರುಷರಿಗೆ: 169
-
ಮಹಿಳೆಯರಿಗೆ: 56
ಅರ್ಹತೆ
-
MBBS ಅಥವಾ PG ಪದವಿ ಹೊಂದಿರಬೇಕು.
-
ರಾಷ್ಟ್ರೀಯ ವೈದ್ಯಕೀಯ ಮಂಡಳಿ ಕಾಯ್ದೆ, 2019 ಪ್ರಕಾರ ಮಾನ್ಯತೆ ಪಡೆದಿರಬೇಕು.
-
ಯಾವುದೇ ರಾಜ್ಯ ವೈದ್ಯಕೀಯ ಮಂಡಳಿ/NMC/MCI ನಿಂದ ಶಾಶ್ವತ ನೋಂದಣಿ ಕಡ್ಡಾಯ.
-
NEET PG 2024 ಅಥವಾ 2025 ಪರೀಕ್ಷೆ ಬರೆದಿರಬೇಕು.
-
MBBS ಅಭ್ಯರ್ಥಿಗಳಿಗೆ ವಯೋಮಿತಿ: 30 ವರ್ಷ ಒಳಗೆ.
-
PG ಅಭ್ಯರ್ಥಿಗಳಿಗೆ ವಯೋಮಿತಿ: 35 ವರ್ಷ ಒಳಗೆ.
-
ಅಂತಿಮ MBBS ಪರೀಕ್ಷೆಯಲ್ಲಿ ಎರಡಕ್ಕಿಂತ ಹೆಚ್ಚು ಪ್ರಯತ್ನ ಮಾಡಿದವರು ಅರ್ಹರಲ್ಲ.
ವೇತನ
-
ಮೂಲ ವೇತನ: ₹61,300 ಪ್ರತಿ ತಿಂಗಳು.
ಅರ್ಜಿ ಶುಲ್ಕ
-
₹200 (ಆನ್‌ಲೈನ್ ಮೂಲಕ ಪಾವತಿಸಬೇಕು).
ಸಂದರ್ಶನ
-
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ನವೆಂಬರ್ 11ರಿಂದ ಸಂದರ್ಶನಗಳು ಆರಂಭವಾಗಲಿವೆ.
ಅರ್ಜಿ ಸಲ್ಲಿಸುವ ವಿಧಾನ
-
ಅಧಿಕೃತ ವೆಬ್‌ಸೈಟ್ www.join.afms.gov.in ಗೆ ಭೇಟಿ ನೀಡಿ.
-
“ಹೊಸ ನೋಂದಣಿ” ಮೇಲೆ ಕ್ಲಿಕ್ ಮಾಡಿ.
-
ವೈಯಕ್ತಿಕ, ಶೈಕ್ಷಣಿಕ ಮತ್ತು NEET PG ವಿವರಗಳನ್ನು ನಮೂದಿಸಿ.
-
ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ (ಫೋಟೋ, ಜನನ ಪ್ರಮಾಣಪತ್ರ, MBBS ಪ್ರಮಾಣಪತ್ರ, ಇಂಟರ್ನ್‌ಶಿಪ್ ಪ್ರಮಾಣಪತ್ರ, NEET PG ಸ್ಕೋರ್, ಆಧಾರ್ ಕಾರ್ಡ್ ಮುಂತಾದವು).
-
ಆನ್‌ಲೈನ್ ಮೂಲಕ ₹200 ಪಾವತಿಸಿ.
-
ಪರಿಶೀಲಿಸಿ “ಸಲ್ಲಿಸು” ಕ್ಲಿಕ್ ಮಾಡಿ.
ವೈದ್ಯಕೀಯ ಕ್ಷೇತ್ರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಲು ಬಯಸುವವರಿಗೆ ಇದು ಉತ್ತಮ ಅವಕಾಶ.
ನಿಮ್ಮ ಪ್ರತಿಕ್ರಿಯೆ ಏನು?