Air India ವಿಮಾನ ದುರಂತ: ಕೊನೆಗೂ ತನಿಖೆಗೆ ನಿರ್ಣಾಯಕವಾಗಿರುವ 2ನೇ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 270ಕ್ಕೂ ಹೆಚ್ಚು ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಇದೀಗ ಏರ್ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಲಭ್ಯವಾಗಿದೆ. ಇದೀಗ ವಿಮಾನದಲ್ಲಿದ್ದ ಎರಡನೇ ಬ್ಲ್ಯಾಕ್ಬಾಕ್ಸ್ ಪತ್ತೆಯಾಗಿದೆ.
ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಭಾನುವಾರ ಪತ್ತೆಯಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ಮಾಹಿತಿ ನೀಡಿದ್ದಾರೆ. ಈ ಎರಡನೇ ಬ್ಲ್ಯಾಕ್ ಬಾಕ್ಸ್ನಿಂದ ಘಟನೆಯ ಪ್ರತಿ ಸೆಕೆಂಡ್ನಲ್ಲಿ ಏನಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇದು ಕಾಕ್ಪಿಟ್ ಮತ್ತು ವಿಮಾನ ವ್ಯವಸ್ಥೆಯಲ್ಲಿ ಏನಾಯ್ತು ಎಂಬುದರ ಕುರಿತು ವಸ್ತುನಿಷ್ಠ ಮಾಹಿತಿಯನ್ನು ನೀಡುತ್ತದೆ.
ಈ ಎರಡನೇ ಬ್ಲ್ಯಾಕ್ ಬಾಕ್ಸ್ನಿಂದ ಘಟನೆಯ ಪ್ರತಿ ಸೆಕೆಂಡ್ನಲ್ಲಿ ಏನಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇದು ಕಾಕ್ಪಿಟ್ ಮತ್ತು ವಿಮಾನ ವ್ಯವಸ್ಥೆಯಲ್ಲಿ ಏನಾಯ್ತು ಎಂಬುದರ ಕುರಿತು ವಸ್ತುನಿಷ್ಠ ಮಾಹಿತಿಯನ್ನು ನೀಡುತ್ತದೆ. ಎಲ್ಲಾ ಕಾಕ್ಪಿಟ್ ಆಡಿಯೋ, ಪೈಲಟ್ ಸಂಭಾಷಣೆಗಳು, ರೇಡಿಯೋ ಪ್ರಸರಣಗಳು ಹಾಗೂ ಇತರೇ ಯಾಂತ್ರಿಕ ಶಬ್ಧಗಳ ಮಾಹಿತಿಯನ್ನು ಸಂಗ್ರಹಿಸಿರುತ್ತದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ವಿಶ್ವದ ಅತ್ಯಂತ ಸುರಕ್ಷಿತ ಪ್ರಯಾಣಿಕ ವಿಮಾನಗಳಲ್ಲಿ ಒಂದಾದ ಬೋಯಿಂಗ್ 787 ಡ್ರೀಮ್ಲೈನ್ರ್ ವಿಮಾನ ನೆಲಕ್ಕೆ ಅಪ್ಪಳಿಸಿತ್ತು.
ನಿಮ್ಮ ಪ್ರತಿಕ್ರಿಯೆ ಏನು?






