Anant Nag: ಅನಂತ್ ನಾಗ್’ಗೆ ಪದ್ಮಭೂಷಣ ಪ್ರಶಸ್ತಿ! ಈ ಬಗ್ಗೆ ಹಿರಿಯ ನಟ ಹೇಳಿದ್ದೇನು..?

ಜನವರಿ 26, 2025 - 16:02
 0  9
Anant Nag: ಅನಂತ್ ನಾಗ್’ಗೆ ಪದ್ಮಭೂಷಣ ಪ್ರಶಸ್ತಿ! ಈ ಬಗ್ಗೆ ಹಿರಿಯ ನಟ ಹೇಳಿದ್ದೇನು..?

 

 ನವದೆಹಲಿ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆಕನ್ನಡದ ಖ್ಯಾತ ನಟ ಅನಂತ್ನಾಗ್, ಕರ್ನಾಟಕದ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಮ್ ಸೇರಿದಂತೆ 19 ಸಾಧಕರಿಗೆ ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ಇನ್ನೂ ಪದ್ಮ ಪ್ರಶಸ್ತಿ ದೊರಕಿದ ಬಳಿಕ ಪ್ರತಿಕ್ರಿಯೆ ನೀಡಿರುವ ಅನಂತ್ ನಾಗ್, ಪ್ರಶಸ್ತಿಯನ್ನು ಕರ್ನಾಟಕದ ಜನರಿಗೆ ಅರ್ಪಿಸಿದ್ದಾರೆ. ಪ್ರಶಸ್ತಿ ಘೋಷಣೆಯಾದ ಬಳಿಕ ಮಾತನಾಡಿರುವ ಅನಂತ್ ನಾಗ್, ‘ ಪ್ರಶಸ್ತಿಯನ್ನು ನಾನು ಕರ್ನಾಟಕದ ಜನರಿಗೆ ಅರ್ಪಿಸುತ್ತೇನೆಎಂದಿದ್ದಾರೆ.

 ಪ್ರಶಸ್ತಿ ಘೋಷಣೆಯಾದ ಬಳಿಕ ಒಂದು ರೀತಿಯ ನಿರಾಳ ಭಾವ ನನ್ನಲ್ಲಿ ಮೂಡಿತು. ನನಗಾಗಿ ಇಷ್ಟು ವರ್ಷ ನನ್ನನ್ನು ಬೆಂಬಲಿಸಿದ ಜನರಿಗೆ ಕೊನೆಗೂ ಸಂತೋಷವಾಗಲಿದೆ ಎಂದೆನಿಸಿತುಎಂದಿದ್ದಾರೆ. ‘ನನಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಜನ ಒತ್ತಾಯಿಸುತ್ತಲೇ ಬಂದಿದ್ದರು. ಇಂಥಹಾ ಚಳವಳಿಗಳು ಎಷ್ಟು ಕಾಲ ಇರುತ್ತವೆ? ಎಂದು ನನಗೆ ಅನಿಸಿತ್ತು. ಆದರೆ ಜನರ ಬೆಂಬಲ ಕೊನೆಯಾಗಲೇ ಇಲ್ಲಎಂದಿದ್ದಾರೆ 

ಪ್ರಧಾನಿ ಮೋದಿ ಅವರಿಗೂ ಧನ್ಯವಾದ ಹೇಳಿರುವ ಅನಂತ್ ನಾಗ್, ‘ಪ್ರಶಸ್ತಿಗಳ ಆಯ್ಕೆಯಲ್ಲಿ ಜನರ ಅಭಿಪ್ರಾಯವನ್ನೂ ಪಡೆಯುವ ಪದ್ಧತಿ ಆರಂಭವಾಗಿದ್ದರಿಂದಲೇ ಇದು ಸಾಧ್ಯವಾಯಿತು. ಇದಕ್ಕೆ ಮೋದಿ ಅವರಿಗೆ ಧನ್ಯವಾದ ಹೇಳಲೇ ಬೇಕುಎಂದಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ನಟನೆಯ ಆರಂಭದ ದಿನಗಳನ್ನು ನೆನಪು ಮಾಡಿಕೊಂಡ ಅನಂತ್ ನಾಗ್, ‘ನಾನು ನಾಟಕಗಳಲ್ಲಿ ನಟಿಸಲು ಆರಂಭಿಸಿದಾಗ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದೆ. ಬರುವ ಸಂಬಳದಿಂದ ಎಲ್ಲವೂ ನಡೆಯುತ್ತಿತ್ತು. ಆದರೆ ಸಿನಿಮಾಕ್ಕೆ ಸೇರಿಕೊಂಡ ಮೇಲೆ ಹಣ ಬೇಕೇ ಬೇಕಾಯ್ತು. ಸಂಭಾವನೆಯೇ ನನ್ನ ಮೊದಲ ಆದ್ಯತೆ ಆಗಿತ್ತು ಸಂದರ್ಭದಲ್ಲಿಎಂದಿದ್ದಾರೆ 

 

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow