Anchor Anushree Marriage: ಆ್ಯಂಕರ್ ಅನುಶ್ರೀ ಮದುವೆಗೆ ಮುಹೂರ್ತ ಫಿಕ್ಸ್ ! ಎಲ್ಲಿ.?
ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಕೊಡಗು ಮೂಲದ ರೋಷನ್ ಅವರೊಂದಿಗೆ ಆಗಸ್ಟ್ 28ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಸಮಾರಂಭವು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ನಲ್ಲಿ ನಡೆಯಲಿದ್ದು, ಬೆಳಿಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ ಮತ್ತು ರೋಷನ್ ಸಪ್ತಪದಿ ತುಳಿಯಲಿದ್ದಾರೆ.
ರೋಷನ್ ಅವರು ರಾಮಮೂರ್ತಿ ಅವರ ಪುತ್ರರಾಗಿದ್ದು, ಅನುಶ್ರಿ ತಮ್ಮ ಆಮಂತ್ರಣ ಪತ್ರಿಕೆಯಲ್ಲಿ, “ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ” ಎಂದು ಬರೆದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?