Pakistan: ಪಾಕ್ ಆಟಗಾರರಿಗೆ PCBಯಿಂದ 33 ಲಕ್ಷ ರೂ. ದಂಡ..! ಯಾಕೆ ಗೊತ್ತಾ..?

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿನ ಹೀನಾಯ ಸೋಲಿನ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ವಿಶೇಷವಾಗಿ ಈಗ ಅವರು ಹಿಂದಿನ ತಪ್ಪುಗಳಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಮೂಲಕ ಪಿಸಿಬಿ ಒಟ್ಟು 33 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ.
ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಅಕ್ಟೋಬರ್ 2024 ರಲ್ಲಿ ಇಂಗ್ಲೆಂಡ್ ವಿರುದ್ಧದ ಮುಲ್ತಾನ್ ಟೆಸ್ಟ್ನಿಂದ ಸೌತ್ ಆಫ್ರಿಕಾ ಸರಣಿಯವರೆಗೆ, ಪಿಸಿಬಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಿಗೆ 33 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಪಾಕಿಸ್ತಾನ್ ತಂಡದ ಯುವ ಆರಂಭಿಕ ಆಟಗಾರ ಸೈಮ್ ಅಯ್ಯೂಬ್, ಉಪನಾಯಕ ಸಲ್ಮಾನ್ ಅಲಿ ಅಘಾ ಅಬ್ದುಲ್ಲಾ ಶಫೀಕ್ ಅವರಿಗೆ 5 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಶಿಸ್ತಿನ ನಡೆ.
ಈ ಮೂವರು ಆಟಗಾರರು ಆಸ್ಟ್ರೇಲಿಯಾ ಸರಣಿಯ ವೇಳೆ ತಡರಾತ್ರಿ ಹೋಟೆಲ್ಗೆ ತಲುಪಿದ್ದರು. ಇದಕ್ಕಾಗಿ ಈ ಮೂವರಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತಲಾ 5 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಹಾಗೆಯೇ ಸೌತ್ ಆಫ್ರಿಕಾ ವಿರುದ್ಧದ ಸರಣಿ ವೇಳೆ ಕೆಲವು ಆಟಗಾರರು ರಾತ್ರಿ 2 ನಿಮಿಷ ತಡವಾಗಿ ಹೋಟೆಲ್ ತಲುಪಿದ್ದರು. ಹೀಗಾಗಿ ಸೂಫಿಯಾನ್ ಮುಖೀಮ್, ಉಸ್ಮಾನ್ ಖಾನ್, ಅಬ್ಬಾಸ್ ಅಫ್ರಿದಿ ಅವರಿಗೆ 18 ಸಾವಿರ ರೂ. (200 ಡಾಲರ್) ದಂಡ ವಿಧಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






