ಐಫೋನ್ ಗಾಗಿ ತನ್ನ ಮನೆಯಲ್ಲಿ ತಾನೇ ಕಳ್ಳನಾದ ಯುವಕ!

ಬಿಹಾರ:- ಇಲ್ಲಿನ ನಳಂದ ಜಿಲ್ಲೆಯಲ್ಲಿ ಪೋಷಕರು ಐಫೋನ್ ಕೊಡಿಸಲು ನಿರಾಕರಿಸಿದ ಹಿನ್ನೆಲೆ ತನ್ನ ಮನೆಯಲ್ಲಿ ತಾನೇ ದರೋಡೆ ನಡೆಸಿದ ಘಟನೆ ಜರುಗಿದೆ. ಶಿಕ್ಷಕ ತಂದೆ ಅಕ್ಟೋಬರ್ 22 ರಂದು ನನ್ನ ಮನೆಯಲ್ಲಿ ದರೋಡೆ ನಡೆದಿದೆ. ಮಗನನ್ನು ಮನೆಯೊಳಕ್ಕೆ ಬೀಗ ಹಾಕಿ ಯಾರೋ ದರೋಡೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕ್ಷಕನ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಮನೆ ಮಗನ ಮುಖವಾಡ ಕಳಚಿದೆ.
ತನಿಖೆಗೆ ಇಳಿದ ಪೊಲೀಸರಿಗೆ ನಾಲ್ವರು ಮನೆಯೊಳಕ್ಕೆ ನುಗ್ಗಿ ದರೋಡೆ ಮಾಡಿದ್ದಾರೆ ಎಂಬ ಸಂಗತಿ ಬಯಲಾಗಿದೆ. ಚಿನ್ನಾಭರಣ ಮತ್ತು ಬೆಳ್ಳಿ ಆಭರಣ ದೋಚಿರುವುದು ಬೆಳಕಿಗೆ ಬಂದಿದೆ. ಬಳಿಕ ಕೌಟುಂಬಿಕ ಕಲಹದಿಂದಾಗಿ ಈ ದರೋಡೆ ನಡೆದಿರಬಹುದೇ ಎಂಬ ಅನುಮಾನ ಪೊಲೀಸರಿಗೆ ಕಾಡಿದೆ. ಆದರೆ ಕೊನೆಗೆ ಅಪ್ರಾಪ್ತ ಮಗನಿಂದಲೇ ಈ ದರೋಡೆ ನಡೆದಿದೆ ಎಂಬುದು ಗೊತ್ತಾಗಿದೆ.ಸದ್ಯ ಮನೆಮಗ ಮತ್ತು ಇಬ್ಬರು ಸ್ನೇಹಿತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






