ಮೂರು ವಾರಗಳಿಂದ ನಾಪತ್ತೆಯಾಗಿದ್ದ ಬಾಲಕಿಯ ಶವ ಪತ್ತೆ! ಶಿಕ್ಷಕ ಬಂಧನ

ಸೆಪ್ಟೆಂಬರ್ 18, 2025 - 22:01
 0  22
ಮೂರು ವಾರಗಳಿಂದ ನಾಪತ್ತೆಯಾಗಿದ್ದ ಬಾಲಕಿಯ ಶವ ಪತ್ತೆ! ಶಿಕ್ಷಕ ಬಂಧನ

ಪಶ್ಚಿಮ ಬಂಗಾಳ: ಸುಮಾರು ಮೂರು ವಾರಗಳಿಂದ ನಾಪತ್ತೆಯಾಗಿದ್ದ ಬುಡಕಟ್ಟು ಬಾಲಕಿಯ ಕೊಳೆತ ಹಾಗೂ ವಿರೂಪಗೊಂಡ ಶವ ಬಿರ್ಭುಮ್ ಜಿಲ್ಲೆಯ ಕಾಳಿದಂಗ ಗ್ರಾಮದ ಸೇತುವೆಯ ಕೆಳಗೆ ನೀರಿನ ಹೊಂಡದಲ್ಲಿ ಪತ್ತೆಯಾಗಿದೆ. ಬಾಲಕಿಯ ಶವವನ್ನು ಮೂರು ತುಂಡುಗಳಾಗಿ ಕತ್ತರಿಸಿ ವಿಲೇವಾರಿ ಮಾಡಲಾಗಿತ್ತು.

ಈ ಪ್ರಕರಣದಲ್ಲಿ ಶಾಲೆಯ ಭೌತಶಾಸ್ತ್ರ ಶಿಕ್ಷಕ ಮನೋಜ್ ಕುಮಾರ್ ಪಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ಅಪಹರಣ ಮತ್ತು ಕೊಲೆ ಆರೋಪ ಅವರ ಮೇಲಿದೆ.

ಬಾಲಕಿಯ ನಾಪತ್ತೆ: ಮೃತ ಬಾಲಕಿ ರಾಂಪುರ್ಹತ್ ಶ್ಯಾಂಪಹರಿ ಶ್ರೀರಾಮಕೃಷ್ಣ ಶಿಕ್ಷಪೀಠದಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಳು. ಅವಳು ಬೀರೋಮೆಶಿಯಾ ಗ್ರಾಮದ ನಿವಾಸಿ. ಆಗಸ್ಟ್ 28ರಂದು ಟ್ಯೂಷನ್‌ಗೆಂದು ಮನೆಯಿಂದ ಹೊರಟಿದ್ದ ಆಕೆ ಮರಳಿ ಹಿಂತಿರುಗಲಿಲ್ಲ. ಕುಟುಂಬದವರು ಅದೇ ದಿನ ರಾಂಪುರ್ಹತ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು.

 ಬಾಲಕಿಯ ಕುಟುಂಬವು ಹಲವು ದಿನಗಳಿಂದ ಶಿಕ್ಷಕ ಪಾಲ್ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ವಿಚಾರಣೆಯ ವೇಳೆ, ಆತ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದಾಗಿ ಮತ್ತು ಶವವನ್ನು ಮೂರು ಭಾಗಗಳಾಗಿ ಕತ್ತರಿಸಿ ನೀರಿನ ತೊಟ್ಟಿಯಲ್ಲಿ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕೊಲೆಯ ನಿಖರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow