Anushka Shetty: ‘ಕಲ್ಕಿ 2898 ಎಡಿ’ ಸಿನಿಮಾ ಸೀಕ್ವೆಲ್​ʼನಲ್ಲಿ ದೀಪಿಕಾ ಸ್ಥಾನಕ್ಕೆ ಬರ್ತಾರಾ ಅನುಷ್ಕಾ ಶೆಟ್ಟಿ!

ಸೆಪ್ಟೆಂಬರ್ 22, 2025 - 20:21
 0  27
Anushka Shetty: ‘ಕಲ್ಕಿ 2898 ಎಡಿ’ ಸಿನಿಮಾ ಸೀಕ್ವೆಲ್​ʼನಲ್ಲಿ ದೀಪಿಕಾ ಸ್ಥಾನಕ್ಕೆ ಬರ್ತಾರಾ ಅನುಷ್ಕಾ ಶೆಟ್ಟಿ!

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್‌ ಸಿದ್ಧತೆಯ ನಡುವೆ, ನಾಯಕಿ ದೀಪಿಕಾ ಪಡುಕೋಣೆ ಚಿತ್ರದಿಂದ ಹೊರಗುಳಿದಿದ್ದಾರೆ. ನಿರ್ಮಾಪಕರು ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ದೀಪಿಕಾ ನಿರ್ಗಮನದ ಬಳಿಕ, ಹೊಸ ನಾಯಕಿ ಆಯ್ಕೆಯ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ. ಅಭಿಮಾನಿಗಳ ಬಹುಮಾನದ ಪ್ರಕಾರ, ಅನುಷ್ಕಾ ಶೆಟ್ಟಿ ಈ ಪಾತ್ರಕ್ಕೆ ಸೂಕ್ತ ಅಭ್ಯರ್ಥಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ನಿರ್ದೇಶಕ ನಾಗ್ ಅಶ್ವಿನ್ ಸಾಮಾಜಿಕ ಜಾಲತಾಣದಲ್ಲಿ “You can’t change what happened, but you can choose what happens next” ಎಂಬ cryptic ಪೋಸ್ಟ್ ಹಂಚಿಕೊಂಡಿದ್ದು ಕುತೂಹಲ ಹುಟ್ಟಿಸಿದೆ.

 ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರು ಈ ಮೊದಲು ‘ಮಿರ್ಚಿ’ ‘ಬಾಹುಬಲಿ’, ‘ಬಾಹುಬಲಿ 2’ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರದ್ದು ಹಿಟ್ ಜೋಡಿ ಆಗಿದೆ. ಟಾಲಿವುಡ್​ನಲ್ಲಿ ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಜೋಡಿ ಮತ್ತೆ ಒಂದಾಗಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಈ ಕೋರಿಕೆಯನ್ನು ನಿರ್ದೇಶಕ ನಾಗ್ ಅಶ್ವಿನ್ ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow