ಅಪ್ಪುವಿಗೆ ಅಪ್ಪನಾಗಿ ಬಂದ್ರು ಗೌತಮ್ ದಿವಾನ್! 'ಮುದ್ದು ಗುಂಡು' ತನ್ನ ಮಗನೇ ಅನ್ನೋದು ಗೊತ್ತಾಯ್ತು

ಸೆಪ್ಟೆಂಬರ್ 22, 2025 - 18:05
 0  24
ಅಪ್ಪುವಿಗೆ ಅಪ್ಪನಾಗಿ ಬಂದ್ರು ಗೌತಮ್ ದಿವಾನ್! 'ಮುದ್ದು ಗುಂಡು' ತನ್ನ ಮಗನೇ ಅನ್ನೋದು ಗೊತ್ತಾಯ್ತು

ಜನಪ್ರಿಯ ಧಾರಾವಾಹಿ ಅಮೃತಧಾರೆಯ ಇಂದಿನ ಸಂಚಿಕೆ ವೀಕ್ಷಕರನ್ನು ಭಾವುಕರನ್ನಾಗಿಸಿದೆ. ಕಳೆದ ಕೆಲ ದಿನಗಳಿಂದ ತಮಾಷೆ ಮಾಡುತ್ತಿದ್ದ ಬಾಲಕನೇ ತನ್ನ ಮಗ ಎಂಬ ವಿಷಯ ಗೊತ್ತಾದ ನಂತರ ಗೌತಮ್ ಪಾತ್ರ ಭಾವುಕನಾಗಿದ್ದಾರೆ. ನಟ ರಾಜೇಶ್ ಅಭಿನಯಿಸಿದ ತಂದೆ-ಮಗನ ಮಿಲನದ ದೃಶ್ಯ ನೋಡುಗರ ಕಣ್ಣೀರನ್ನು ತರಿಸಿದೆ.

ಕಥೆಯಲ್ಲಿ, ಮಗನನ್ನು ಹುಡುಕಲು ಗೌತಮ್ ಮತ್ತು ಆನಂದ್ ಶಾಲೆಗೆ ಆಗಮಿಸುತ್ತಾರೆ. ಅಪ್ಪು ಎಂಬ ಬಾಲಕ ಅವರ ನೆರವು ಬೇಡಿಕೆಗೆ ಪ್ರತಿಯಾಗಿ ತನ್ನ ಶರತ್ತುಗಳನ್ನು ಇಟ್ಟಿದ್ದಾನೆ. ಗೌತಮ್ ತನ್ನ ನಿಜವಾದ ತಂದೆ ಎಂದು ತಿಳಿಯದ ಅಪ್ಪು, ಬಾಡಿಗೆ ಅಪ್ಪನನ್ನಾಗಿ ಮಾಡಿಕೊಂಡಿರುವ ತಿರುವು ಕಥೆಗೆ ಕುತೂಹಲ ಹೆಚ್ಚಿಸಿದೆ.

ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿ ಎಂಬ ಅಂಶವನ್ನು ಕೂಡಾ ತೋರಿಸಲಾಗಿದೆ. ಪುನೀತ್‌ರಂತೆ ವೇಷಧಾರಣೆ ಮಾಡಿ ಪ್ರಿನ್ಸಿಪಾಲ್‌ರನ್ನು ಭೇಟಿಯಾಗಲು ಒತ್ತಾಯಿಸುವ ದೃಶ್ಯ ಪ್ರೇಕ್ಷಕರಿಗೆ ಮನರಂಜನೆ ನೀಡಿದರೆ, ಗೌತಮ್ ಮಗನನ್ನು ತಬ್ಬಿಕೊಂಡು ಭಾವುಕರಾಗುವ ಕ್ಷಣ ಹೃದಯ ಮುಟ್ಟುವಂತಿತ್ತು.

ಇದೇ ಸಮಯದಲ್ಲಿ ಗೌತಮ್ ಜೊತೆ ನಡೆದುಕೊಂಡು ಹೋಗುವಾಗ ಅಪ್ಪು ಗಾಬರಿ ಬಿದ್ದಿದ್ದು ಗೌತಮ್ ಯಾಕೋ ಏನಾಯ್ತು ಎಂದು ಕೇಳುತ್ತಾನೆ. ಆಗ ತನ್ನ ತಾಯಿ ಭೂಮಿಕಾಳನ್ನು ಅಪ್ಪು ತೋರಿಸಿದ್ದು ಭೂಮಿಕಾಳನ್ನು ನೋಡಿ ಗೌತಮ್ ಶಾಕ್ ಆಗಿದ್ದಾನೆ. ನಿಮ್ಮ ತಾಯಿ ಇವ್ರೇನಾ ಎಂದು ತನ್ನ ಮಗನ ಬಳಿ ಕೇಳಿದ್ದಾನೆ. ಆಗ ನೂರಕ್ಕೆ ನೂರು ಅವರೇ ನನ್ನ ರಿಯಲ್ ಅಮ್ಮ ಎಂದು ಆಕಾಶ್ ಹೇಳಿದ್ದು ಈ ವಿಚಾರ ಕೇಳಿ ಗೌತಮ್ ಭಾವುಕಗೊಂಡಿದ್ದಾನೆ. ತನ್ನ ಮಗನನ್ನು ಅಪ್ಪಿಕೊಂಡಿದ್ದಾನೆ.

ಈ ದೃಶ್ಯದ ತುಣುಕು ಝೀ ಕನ್ನಡ ವಾಹಿನಿಯ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಪ್ರೇಕ್ಷಕರು ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. “ಇವತ್ತಿನ ಸಂಚಿಕೆ ತುಂಬಾ ಚೆನ್ನಾಗಿದೆ. ಅಪ್ಪು ಮತ್ತು ಗೌತಮನ ಅಭಿನಯ ಪಾದರಸದಂತೆ. ತಂದೆ-ಮಗನ ಜೋಡಿ ನೋಡುವುದೇ ಸಂತೋಷ” ಎಂದು ಲಲಿತಾ ಎಂಬ ವೀಕ್ಷಕಿ ಕಾಮೆಂಟ್ ಮಾಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow