Arrest; ಕೇರಳದ ಹಿರಿಯ ನಟ ಜಯಕೃಷ್ಣನ್ ಅರೆಸ್ಟ್; ಮಾಡಿದ ತಪ್ಪೇನು?
ಕ್ಯಾಬ್ ಚಾಲಕನ ಟೆರರಿಸ್ಟ್ ಎಂದ ಮಲಯಾಳಂ ನಟ ಜಯಕೃಷ್ಣನ್ ನನ್ನು ಬಂಧಿಸಲಾಗಿದೆ. ಸೆ.09ರಂದು ಮಂಗಳೂರಿಗೆ ಬಂದಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಊಬರ್ ಬುಕ್ ಮಾಡಿದ್ದರು. ಊಬರ್ ಕ್ಯಾಬ್ ಚಾಲಕ ಶಫೀಕ್ ಕಾರು ಬುಕ್ ಆಯಿತು. ಕರೆ ಮಾಡಿ ಎಲ್ಲಿಗೆ ಬರಬೇಕು ಎಂದು ಕೇಳಿದಾಗ, ಬೈದಿದ್ದರು. ಕುಟುಂಬದವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದರು. ಇದರಿಂದ ಕುಪಿತಗೊಂಡ ಶಫೀಕ್ ದೂರು ದಾಖಲು ಮಾಡಿದ್ದರು.
ಅನೇಕ ಕ್ಯಾಬ್ ಚಾಲಕರಿಗೆ ಜಯಕೃಷ್ಣನ್ ಇದೇ ರೀತಿ ಆಟ ಆಡಿಸಿದ್ದಾರೆ ಎನ್ನಲಾಗಿದೆ. ಕ್ಯಾಬ್ ಬುಕ್ ಮಾಡಿದ ಬಳಿಕ ಕಾರು ಚಾಲಕ 500 ಮೀಟರ್ ದೂರದಲ್ಲಿರುವಾಗ ರೈಡ್ನ ಕ್ಯಾನ್ಸಲ್ ಮಾಡುತ್ತಿದ್ದರು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘ ಮಾಡಿತ್ತು. ಈಗ ಜಯಕೃಷ್ಣನ್ ಅವರ ಬಂಧನ ಆಗಿದೆ.
ನಿಮ್ಮ ಪ್ರತಿಕ್ರಿಯೆ ಏನು?