ಪ್ರಿಯಕರನ ಜೊತೆ ಓಡಿ ಹೋದ ಮಗಳು: ಊರಿಗೆ ತಿಥಿ ಊಟ ಹಾಕಿಸಿದ ತಂದೆ

ಅಕ್ಟೋಬರ್ 11, 2025 - 18:26
ಅಕ್ಟೋಬರ್ 11, 2025 - 16:29
 0  17
ಪ್ರಿಯಕರನ ಜೊತೆ ಓಡಿ ಹೋದ ಮಗಳು: ಊರಿಗೆ ತಿಥಿ ಊಟ ಹಾಕಿಸಿದ ತಂದೆ

ಚಿಕ್ಕೋಡಿ:- ಬೆಳಗಾವಿಯ ನಾಗರಾಳ ಗ್ರಾಮದಲ್ಲಿ ಮಗಳು ಪ್ರೀತಿಸಿದಾತನೊಂದಿಗೆ ಓಡಿಹೋಗಿದ್ದರಿಂದ ಮನನೊಂದ ತಂದೆ ಊರಿಗೆ ಊಟ ಹಾಕಿಸಿ, ತಿಥಿ ಕಾರ್ಯ ನೆರವೇರಿಸಿರುವ ಘಟನೆ ಜರುಗಿದೆ. 

ಶಿವಗೌಡ ಪಾಟೀಲ್ ಎಂಬವರಿಗೆ ನಾಲ್ಕು ಹೆಣ್ಣುಮಕ್ಕಳಿದ್ದರು. ಕೊನೆಯ ಮಗಳು, ಅದೇ ಗ್ರಾಮದ ಯುವಕನನ್ನು ಪ್ರೀತಿಸಿ  ಆತನೊಂದಿಗೆ ಓಡಿಹೋಗಿದ್ದಳು. ಮೊದಲಿಗೆ ಶಿವಗೌಡ ಅವರು ಮಗಳು ಕಾಣೆಯಾಗಿದ್ದಾಳೆ ಎಂದು ರಾಯಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಗಳು ಓಡಿಹೋಗಿದ್ದಾಳೆ ಎಂಬ ವಿಚಾರ ತಿಳಿದ ತಂದೆ ಮನನೊಂದಿದ್ದರು

ಬಳಿಕ ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು, ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿ ಭೋಜನ ಹಾಕಿಸಿ, ಆಕೆಯ ತಿಥಿ ಕಾರ್ಯವನ್ನ ಮಾಡಿ ಮುಗಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow