"ಕಾಂತಾರ ಚಾಪ್ಟರ್–1" ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಎಂದ ರಾಕಿಂಗ್ ಸ್ಟಾರ್ ಯಶ್!
ವಿಶ್ವದಾದ್ಯಂತ ಬಿಡುಗಡೆ ಆಗಿರುವ ಕಾಂತಾರ ಚಾಪ್ಟರ್-1 ಸಿನಿಮಾಗೆ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಓಪನಿಂಗ್ ಸಿಕ್ಕಿದೆ. ನಿರ್ಮಾಪಕ ವಿಜಯ ಕಿರಂಗದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ಕಾಂತಾರ ಚಾಪ್ಟರ್ -1 ಸಿನಿಮಾಗಾಗಿ 125 ಕೋಟಿ ರೂಪಾಯಿ ಖರ್ಚು ಮಾಡಿದೆ.
ನಿನ್ನೆ ಮೊದಲ ದಿನ ಬೆಳಿಗ್ಗೆ ಷೋಗಳಿಗೆ ಕಡಿಮೆ ಸಂಖ್ಯೆಯ ಪ್ರೇಕ್ಷಕರಿದ್ದರೂ, ಮಧ್ಯಾಹ್ನದ ಷೋ ಮತ್ತು ಸಂಜೆ, ರಾತ್ರಿಯ ಷೋಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಿದ್ದಾರೆ. ಇದರಿಂದಾಗಿ ಬುಕ್ ಮೇ ಷೋ ವೆಬ್ ಸೈಟ್ ನಲ್ಲಿ ಗಂಟೆಗೆ 85 ಸಾವಿರ ಟಿಕೆಟ್ ಗಳು ಬುಕ್ ಆಗಿವೆ.
ಇದರ ನಡುವೆ ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಾಕಿಂಗ್ ಸ್ಟಾರ್ ಯಶ್ ಹಾಡಿ ಹೊಗಳಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡದ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಯಶ್, ಕಾಂತಾರ ಅಧ್ಯಾಯ 1 ಕನ್ನಡ ಮತ್ತು ಭಾರತೀಯ ಸಿನಿಮಾಗಳಿಗೆ ಹೊಸ ಮಾನದಂಡ ಎಂದು ಬಣ್ಣಿಸಿದ್ದಾರೆ.
ನಿಮ್ಮ ದೃಢನಿಶ್ಚಯ, ಸ್ಥಿತಿಸ್ಥಾಪಕತ್ವ ಮತ್ತು ಭಕ್ತಿಯು ಪ್ರತಿ ಚೌಕಟ್ಟಿನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ, ನಿಮ್ಮ ದೃಷ್ಟಿಕೋನವು ಪರದೆಯ ಮೇಲೆ ನಿಜವಾಗಿಯೂ ತಲ್ಲೀನತೆಯ ಅನುಭವ ನೀಡುತ್ತದೆ ಎಂದು ರಿಷಬ್ ಶೆಟ್ಟಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?