ಪತ್ನಿ ಜೊತೆಗಿನ ಲೈಂಗಿಕ ಕ್ರಿಯೆ ರೆಕಾರ್ಡ್​ ಮಾಡಿ ಕಿರುಕುಳ! ಸ್ನೇಹಿತರ ಜೊತೆ ಮಲಗುವಂತೆ ಪೀಡಿಸುತ್ತಿದ್ದ

ಅಕ್ಟೋಬರ್ 3, 2025 - 17:59
 0  16
ಪತ್ನಿ ಜೊತೆಗಿನ ಲೈಂಗಿಕ ಕ್ರಿಯೆ ರೆಕಾರ್ಡ್​ ಮಾಡಿ ಕಿರುಕುಳ! ಸ್ನೇಹಿತರ ಜೊತೆ ಮಲಗುವಂತೆ ಪೀಡಿಸುತ್ತಿದ್ದ

ಬೆಂಗಳೂರು: ಪತ್ನಿಯೊಂದಿಗೆ ನಡೆದ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ, ಸ್ನೇಹಿತರಿಗೆ ಹಂಚಿಕೊಂಡಿದ್ದ ಪತಿ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾರೆ. ಈ ಘಟನೆ ಪುಟ್ಟೇನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಪತಿ ಪತ್ನಿಯೊಂದಿಗೆ ನಡೆದ ಲೈಂಗಿಕ ಕ್ರಿಯೆಯನ್ನು ಮೊಬೈಲ್/ಕ್ಯಾಮರಾದಲ್ಲಿ ಸೆರೆಹಿಡಿದು, ಆ ವಿಡಿಯೋಗಳನ್ನು ಸ್ನೇಹಿತರಿಗೆ ಹಂಚಿದ್ದಾನೆ.

ಅಲ್ಲದೇ, ಸ್ನೇಹಿತರಿಗೂ ದೈಹಿಕ ಸುಖ ನೀಡುವಂತೆ ಪತ್ನಿಯನ್ನು ಒತ್ತಾಯಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ.ಆರೋಪಿ ಸಯ್ಯದ್ ದಿನನಿತ್ರ ಹೆಂಡತಿಗೆ ಕಿರುಕುಳ ನೀಡುತ್ತಿದ್ದುದಲ್ಲದೆ, 19 ಮಂದಿ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಹೆಮ್ಮೆಪಟ್ಟು ಹೇಳಿಕೊಳ್ಳುತ್ತಿದ್ದ ಎಂದೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.ಮನೆಯ ಬೆಡ್​ ರೂಂನಲ್ಲಿ ಸೀಕ್ರೆಟ್ ಕ್ಯಾಮೆರಾ ಅಳವಡಿಸಿ ಹೆಂಡತಿ ಜತೆಗಿನ ಲೈಂಗಿಕ ಕ್ರಿಯೆಯ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ ಆರೋಪಿ,

ಆ ಖಾಸಗಿ ವಿಡಿಯೋಗಳನ್ನು ದುಬೈಯಲ್ಲಿ ವಾಸಿಸುವ ತನ್ನ ಸ್ನೇಹಿತರಿಗೆ ಶೇರ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇಷ್ಟೇ ಅಲ್ಲದೆ, ಹೊರದೇಶದಲ್ಲಿರುವ ತನ್ನ ಕೆಲವು ಮಂದಿ ಸ್ನೇಹಿತರೊಂದಿಗೂ ದೈಹಿಕ ಸಂಬಂಧ ಬೆಳೆಸುವಂತೆ ಪತ್ನಿಯನ್ನು ಒತ್ತಾಯಿಸಿರುವ ಗಂಭೀರ ಆರೋಪ ಕೂಡ ದಾಖಲಾಗಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow