ಬಾಲಿವುಡ್ ನಟಿಯೊಂದಿಗೆ ಲವ್ʼನಲ್ಲಿ ಬಿದ್ರ ಪಾಂಡ್ಯ? ಹೊಸ ಗರ್ಲ್ಫ್ರೆಂಡ್ ಪರಿಚಯಿಸಿದ ಸ್ಟಾರ್ ಕ್ರಿಕೆಟಿಗ!

ಅಕ್ಟೋಬರ್ 12, 2025 - 11:57
 0  11
ಬಾಲಿವುಡ್ ನಟಿಯೊಂದಿಗೆ ಲವ್ʼನಲ್ಲಿ ಬಿದ್ರ ಪಾಂಡ್ಯ? ಹೊಸ ಗರ್ಲ್ಫ್ರೆಂಡ್ ಪರಿಚಯಿಸಿದ ಸ್ಟಾರ್ ಕ್ರಿಕೆಟಿಗ!

ಮುಂಬೈ: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತೆ ಲವ್‌ಲೈಫ್‌ನಲ್ಲಿ ಸುದ್ದಿಯಲ್ಲಿದ್ದಾರೆ. ನತಾಶಾ ಸ್ಟಾನ್ಕೋವಿಕ್ ಅವರಿಂದ ವಿಚ್ಛೇದನ ಪಡೆದ ಬಳಿಕ, ಪಾಂಡ್ಯ ಇದೀಗ ಮಾದರಿ ಹಾಗೂ ನಟಿ ಮಹೀಕಾ ಶರ್ಮಾ ಅವರೊಂದಿಗೆ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ಟಿ20 ಏಷ್ಯಾಕಪ್ ಟೂರ್ನಿ ಬಳಿಕ ರಿಲ್ಯಾಕ್ಸ್ ಮೂಡ್‌ನಲ್ಲಿ ಇರುವ ಪಾಂಡ್ಯ, ಮಹೀಕಾ ಶರ್ಮಾ ಅವರೊಂದಿಗೆ ಹಾಲಿಡೇಸ್‌ ಎಂಜಾಯ್ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಹೀಕಾ ಶರ್ಮಾ ಜೊತೆ ತೆಗೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬೀಚ್‌ ಹಾಗೂ ನೈಟ್ ಔಟ್ ವೇಳೆ ತೆಗೆದಿರುವ ಫೋಟೋಗಳಲ್ಲಿ ಇಬ್ಬರು ಆಪ್ತವಾಗಿ ಕಾಣಿಸಿಕೊಂಡಿದ್ದಾರೆ. ಫೋಟೋಗಳಲ್ಲಿ ಪಾಂಡ್ಯ ಮಹೀಕಾ ಅವರ ಹೆಗಲ ಮೇಲೆ ಕೈ ಹಾಕಿಕೊಂಡಿರುವ ದೃಶ್ಯವೂ ಕಂಡುಬರುತ್ತಿದೆ.

ಮಹೀಕಾ ಶರ್ಮಾ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದು, ಫ್ಯಾಷನ್ ಉದ್ಯಮದಲ್ಲಿ ತಮ್ಮದೇ ಆದ ಹೆಸರು ಮಾಡಿಸಿಕೊಂಡಿದ್ದಾರೆ. ಅವರು “ಐಎಫ್‌ಎ ಮಾಡೆಲ್ ಆಫ್ ದಿ ಇಯರ್” ಹಾಗೂ “ಎಲೆ ಮಾಡೆಲ್ ಆಫ್ ದಿ ಸೀಸನ್” ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಹೀಕಾ ಶರ್ಮಾ ಕ್ರಿಯಾಶೀಲರಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ 1.47 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯ 2024ರಲ್ಲಿ ಟೀ20 ವಿಶ್ವಕಪ್ ಟೂರ್ನಿ ಬಳಿಕ ನತಾಶಾ ಸ್ಟಾನ್ಕೋವಿಕ್ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ಸುದ್ದಿಗಳು ಹರಿದಾಡಿದರೂ, ಪಾಂಡ್ಯ ಅವರು ಸಂದರ್ಶನದಲ್ಲಿ ಈ ಸಂಬಂಧಗಳು ಡೇಟಿಂಗ್ ಹಂತಕ್ಕೆ ಬರುವ ಮೊದಲು ಮುಗಿದಿರುವುದಾಗಿ ಹೇಳಿದ್ದಾರೆ. ಇದೀಗ ಪಾಂಡ್ಯ ಮತ್ತು ಮಹೀಕಾ ಶರ್ಮಾ ಅವರ ಸಂಬಂಧವನ್ನು ಫೋಟೋಗಳ ಮೂಲಕ ಬಹಿರಂಗಪಡಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow