Asia Cup 2025: ಟೀಂ ಇಂಡಿಯಾ ಸೂಪರ್ 4 ಗೆ ಪ್ರವೇಶ: ಇಂದು ಭಾರತ - ಒಮಾನ್ ಮುಖಾಮುಖಿ
ಏಷ್ಯಾಕಪ್ 2025ರಲ್ಲಿ ಸೂರ್ಯಕುಮಾರ್ ಪಡೆ ಶ್ರೇಷ್ಠ ಪ್ರದರ್ಶನ ತೋರಿಸಿದೆ. ಈಗಾಗಲೇ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಭಾರತ, ಸೂಪರ್ 4 ಹಂತಕ್ಕೆ ಸ್ಥಾನ ಪಕ್ಕಾ ಮಾಡಿಕೊಂಡಿದೆ. ಇಂದು ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಒಮಾನ್ ವಿರುದ್ಧ ಮೈದಾನಕ್ಕಿಳಿಯಲಿದೆ.
ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ,
ಮುಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತ ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ.
ಇದೀಗ ಕೊನೆಯ ಗುಂಪು ಹಂತದ ಪಂದ್ಯವನ್ನು ಒಮಾನ್ ವಿರುದ್ಧ ಆಡಲಿದೆ. ಒಮಾನ್ ಈಗಾಗಲೇ ಸೂಪರ್ ಫೋರ್ ಸ್ಪರ್ಧೆಯಿಂದ ಹೊರಬಿದ್ದಿರುವುದರಿಂದ, ಈ ಪಂದ್ಯ ಎರಡೂ ತಂಡಗಳಿಗೆ ಕೇವಲ ಔಪಚಾರಿಕವಾಗಿಯೇ ಉಳಿಯಲಿದೆ.
ಮ್ಯಾಚ್ ಡೀಟೈಲ್ಸ್:
-
ಪಂದ್ಯ: ಭಾರತ VS ಒಮಾನ್
-
ಸ್ಥಳ: ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣ
-
ಸಮಯ: ರಾತ್ರಿ 8 ಗಂಟೆಗೆ ಆರಂಭ – ಟಾಸ್ ಸಂಜೆ 7:30ಕ್ಕೆ
-
ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಸೋನಿಲೈವ್ ಆಪ್/ವೆಬ್‌ಸೈಟ್‌ನಲ್ಲಿ ನೇರಪ್ರಸಾರ
ಪಾಕಿಸ್ತಾನ ವಿರುದ್ಧದ ಗೆಲುವಿನ ಸಂಭ್ರಮದಲ್ಲಿ ಮುಳುಗಿರುವ ಟೀಂ ಇಂಡಿಯಾ, ಈಗ ಒಮಾನ್ ವಿರುದ್ಧವೂ ಜಯಗಳಿಸಿ ಸೂಪರ್ 4 ಪ್ರವೇಶವನ್ನು ಇನ್ನಷ್ಟು ಬಲಪಡಿಸಬಹುದೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ , ತಿಲಕ್ ವರ್ಮಾ , ಹಾರ್ದಿಕ್ ಪಾಂಡ್ಯ , ಶಿವಂ ದುಬೆ , ಜಿತೇಶ್ ಶರ್ಮಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ , ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ
ಒಮಾನ್ ತಂಡ: ಜತೀಂದರ್ ಸಿಂಗ್ (ನಾಯಕ), ಆಶಿಶ್ ಒಡೆದಾರ, ವಿನಾಯಕ್ ಶುಕ್ಲಾ, ಹಮ್ಮದ್ ಮಿರ್ಜಾ (ವಾಕ್), ಅಮೀರ್ ಕಲೀಂ, ಹಸ್ನೈನ್ ಶಾ, ಕರಣ್ ಸೋನಾವಾಲೆ, ಮೊಹಮ್ಮದ್ ನದೀಮ್, ಆರ್ಯನ್ ಬಿಷ್ತ್, ಮೊಹಮ್ಮದ್ ನದೀಮ್, ಸುಫ್ಯಾನ್ ಮೆಹಮೂದ್, ಸಮಯ್ ಶ್ರೀವಾಸ್ತವ, ಶಕೀಲ್ ಅಹ್ಮದ್, ಮೊಹಮ್ಮದ್ ಇಮ್ರಾನ್
ನಿಮ್ಮ ಪ್ರತಿಕ್ರಿಯೆ ಏನು?