Asia Cup 2025: ಭಾರತ- ಪಾಕ್ ಪಂದ್ಯದ ಟಿಕೆಟ್ 15 ಲಕ್ಷ ರೂ.ಗೆ ಮಾರಾಟ..!
ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ 2025 ರ ಟಿ20 ಏಷ್ಯಾಕಪ್ ಆರಂಭವಾಗಲಿದೆ. 8 ತಂಡಗಳ ನಡುವಿನ ಈ ಸ್ಪರ್ಧೆಯಲ್ಲಿ, ಟೀಂ ಇಂಡಿಯಾ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದೇ ವೇಳೆ, ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಭಾರತ–ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ.
ಈ ಪಂದ್ಯಾವಳಿಯ ಟಿಕೆಟ್ಗಳ ಅಧಿಕೃತ ಮಾರಾಟ ಇಂದಿನಿಂದ ಪ್ರಾರಂಭವಾಗಿದ್ದರೂ, ಭಾರತ–ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದ ಟಿಕೆಟ್ಗಳು ಈಗಾಗಲೇ ಕಾಳಬಜಾರಿನಲ್ಲಿ 15 ಲಕ್ಷ ರೂ. ದರಕ್ಕೆ ಮಾರಾಟವಾಗುತ್ತಿವೆ ಎಂಬ ಮಾಹಿತಿ ಹೊರಬಂದಿದೆ. ಕೆಲವು ಅನಧಿಕೃತ ವೆಬ್ಸೈಟ್ಗಳಲ್ಲಿಯೂ ಟಿಕೆಟ್ಗಳು 15.75 ಲಕ್ಷ ರೂ.ವರೆಗೆ ಮಾರಾಟವಾಗುತ್ತಿವೆ ಎಂದು ಇನ್ಸೈಡ್ಸ್ಪೋರ್ಟ್ ವರದಿ ಮಾಡಿದೆ.
ಈ ಬಗ್ಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಭಾನ್ ಅಹ್ಮದ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದು, "ಅನಧಿಕೃತ ವೆಬ್ಸೈಟ್ಗಳ ವಂಚನೆಗೆ ಬಲಿಯಾಗಬೇಡಿ. ಟಿಕೆಟ್ಗಳನ್ನು ಅಧಿಕೃತ ವೆಬ್ಸೈಟ್ನಿಂದ ಮಾತ್ರ ಖರೀದಿಸಿ," ಎಂದು ಸಲಹೆ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?