Asia Cup 2025: ಮೊದಲ ಬಾರಿಗೆ ಹೊಸ ತಂಡದ ವಿರುದ್ಧ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ!
ಏಷ್ಯಾಕಪ್ ಟಿ20 ಟೂರ್ನಿ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತವು ಪಾಕಿಸ್ತಾನ್, ಯುಎಇ ಮತ್ತು ಒಮಾನ್ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ ಜಯಗಳಿಸಿದರೆ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಲಿದೆ.
ಟೀಮ್ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪ್ರವೇಶಿಸಿ ಈಗಾಗಲೇ 93 ವರ್ಷಗಳಾಗಿವೆ. ಆದರೆ ಇದೇ ಮೊದಲ ಬಾರಿಗೆ ಏಷ್ಯಾದ ತಂಡವಾದ ಒಮಾನ್ ವಿರುದ್ಧ ಭಾರತ ಆಡುವುದಕ್ಕೆ ಸಜ್ಜಾಗಿದೆ. ಇದುವರೆಗೆ ಒಮಾನ್ ತಂಡವು ಭಾರತದ ವಿರುದ್ಧ ಕಣಕ್ಕಿಳಿದಿಲ್ಲ.
2014ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಒಮಾನ್ ತಂಡವು ಈ ಬಾರಿಯ ಏಷ್ಯಾಕಪ್ಗೆ ಅರ್ಹತೆ ಪಡೆದಿದೆ. ಸೆಪ್ಟೆಂಬರ್ 19ರಂದು ನಡೆಯುವ ಮೊದಲ ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ–ಒಮಾನ್ ಮುಖಾಮುಖಿಯಾಗಲಿದ್ದು, ಇದು ಒಮಾನ್ ತಂಡಕ್ಕೆ ಸ್ಮರಣೀಯ ಕ್ಷಣವಾಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?