Asia Cup 2025: ಅಂಪೈರ್ ನಿರ್ಧಾರವನ್ನು ಸೂರ್ಯಕುಮಾರ್ ನಿರಾಕರಿಸಿದ್ಯಾಕೆ ಗೊತ್ತಾ.?

ಸೆಪ್ಟೆಂಬರ್ 13, 2025 - 09:21
 0  21
Asia Cup 2025: ಅಂಪೈರ್ ನಿರ್ಧಾರವನ್ನು ಸೂರ್ಯಕುಮಾರ್ ನಿರಾಕರಿಸಿದ್ಯಾಕೆ ಗೊತ್ತಾ.?

ದುಬೈ: 2025 ಏಷ್ಯಾಕಪ್ನಲ್ಲಿ ಭಾರತವು ಭರ್ಜರಿ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಒಂಬತ್ತು ವಿಕೆಟ್ಗಳ ಜಯ ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡವು 13.1 ಓವರ್ಗಳಲ್ಲಿ ಕೇವಲ 57 ರನ್ಗಳಿಗೆ ಆಲೌಟ್ ಆಯಿತು. ನಂತರ, ಭಾರತ ಕೇವಲ 27 ಎಸೆತಗಳಲ್ಲಿ (4.3 ಓವರ್) ಒಂದು ವಿಕೆಟ್ ನಷ್ಟಕ್ಕೆ 60 ರನ್ಗಳನ್ನು ಗಳಿಸಿ ಸುಲಭ ಜಯ ದಾಖಲಿಸಿತು.

ಆದರೆ, ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ತೋರಿದ ಕ್ರೀಡಾಸ್ಫೂರ್ತಿ ವಿಶ್ವ ಕ್ರಿಕೆಟ್ ಅಭಿಮಾನಿಗಳ ಮನಸೆಳೆದಿತು. ಯುಎಇ ಆಟಗಾರ ಜುನೈದ್ ರನ್ಔಟ್ ಆದಂತೆ ತೋರಿದ ಸಂದರ್ಭ ಮೂರನೇ ಅಂಪೈರ್ ನಿರ್ಧಾರ ನೀಡಿದರೂ, ಸೂರ್ಯಕುಮಾರ್ ತಮ್ಮ ಮನವಿಯನ್ನು ಹಿಂತೆಗೆದುಕೊಂಡರು. ಫೀಲ್ಡ್ ಅಂಪೈರ್ ಜೊತೆ ಚರ್ಚಿಸಿದ ನಂತರ ಅವರು "ಔಟ್ ಬೇಡ" ಎಂದು ಸೂಚಿಸಿದರು.

ಸೂರ್ಯಕುಮಾರ್ ಅವರ ನಡೆ ಕ್ರೀಡಾಂಗಣದಲ್ಲಿ ಕ್ರೀಡಾಸ್ಫೂರ್ತಿಗೆ ಉತ್ತಮ ಉದಾಹರಣೆಯಾಗಿ ಪರಿಗಣಿಸಲಾಗಿದ್ದು, ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರಿಂದ ಮೆಚ್ಚುಗೆ ಪಡೆಯುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow