ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ 537 ಹುದ್ದೆ: PUC ಪಾಸಾಗಿದ್ದರೂ ಸಾಕು

ಸೆಪ್ಟೆಂಬರ್ 23, 2025 - 08:03
ಸೆಪ್ಟೆಂಬರ್ 13, 2025 - 14:50
 0  11
ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ 537 ಹುದ್ದೆ: PUC ಪಾಸಾಗಿದ್ದರೂ ಸಾಕು

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) 523 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಪ್ರಕ್ರಿಯೆ ಸೆಪ್ಟೆಂಬರ್ 12ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 11, 2025ರವರೆಗೆ ನಡೆಯಲಿದೆ.

ಹುದ್ದೆಗಳಿಗೆ ಕನಿಷ್ಠ 10ನೇ ತರಗತಿ ಪಾಸ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 12ನೇ ತರಗತಿ ಪಾಸ್, ಡಿಪ್ಲೊಮಾ ಮತ್ತು ಪದವೀಧರರೂ ಸಹ ಅರ್ಹರಾಗಿದ್ದಾರೆ. ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 24 ವರ್ಷವಾಗಿರಬೇಕು. ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಲಭ್ಯ.

ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಲಾಗುವುದು. ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ನಂತರ ಅಂತಿಮ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು iocl.com ಅಥವಾ ಅಪ್ರೆಂಟಿಸ್ಶಿಪ್ ಪೋರ್ಟಲ್ಗೆ ಭೇಟಿ ನೀಡಬಹುದು.

·  ಒಟ್ಟು ಹುದ್ದೆಗಳು: 523

·  ಅರ್ಜಿಯ ಪ್ರಾರಂಭ ದಿನಾಂಕ: ಸೆಪ್ಟೆಂಬರ್ 12, 2025

·  ಕೊನೆಯ ದಿನಾಂಕ: ಅಕ್ಟೋಬರ್ 11, 2025

·  ಅರ್ಹತೆ: ಕನಿಷ್ಠ 10ನೇ ತರಗತಿ ಪಾಸ್. (12ನೇ, ಡಿಪ್ಲೊಮಾ, ಪದವಿ ಹೊಂದಿದವರು ಸಹ ಅರ್ಜಿ ಹಾಕಬಹುದು)

·  ವಯಸ್ಸಿನ ಮಿತಿ: 18 ರಿಂದ 24 ವರ್ಷ (SC, ST, OBC ಅಭ್ಯರ್ಥಿಗಳಿಗೆ ಸಡಿಲಿಕೆ ಇದೆ)

·  ಆಯ್ಕೆ ಪ್ರಕ್ರಿಯೆ:

·         ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಶಾರ್ಟ್ಲಿಸ್ಟ್

·         ದಾಖಲೆ ಪರಿಶೀಲನೆ

·         ವೈದ್ಯಕೀಯ ಪರೀಕ್ಷೆ

·  ಅರ್ಜಿಸಲ್ಲಿಸುವ ವೆಬ್ಸೈಟ್: iocl.com ಅಥವಾ ಅಪ್ರೆಂಟಿಸ್ಶಿಪ್ ಪೋರ್ಟಲ್

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow