Bangalore Rains: ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಡೀ ಮಳೆ ಅಬ್ಬರ: ಅಕ್ಟೋಬರ್ 13ರ ತನಕ ಯೆಲ್ಲೋ ಅಲರ್ಟ್

ಅಕ್ಟೋಬರ್ 11, 2025 - 10:24
 0  11
Bangalore Rains: ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಡೀ ಮಳೆ ಅಬ್ಬರ: ಅಕ್ಟೋಬರ್ 13ರ ತನಕ ಯೆಲ್ಲೋ ಅಲರ್ಟ್

ಬೆಂಗಳೂರು: ಕಳೆದ ಎರಡು ದಿನಗಳಿಂದ ನಗರದಲ್ಲಿ ರಾತ್ರಿ ವೇಳೆ ಮಳೆ ಅಬ್ಬರಿಸುತ್ತಿದೆ. ಶುಕ್ರವಾರ ರಾತ್ರಿ ಕೂಡಾ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ರಾತ್ರಿ 10 ಗಂಟೆಯಿಂದ ಆರಂಭವಾದ ಮಳೆ ಮಧ್ಯರಾತ್ರಿ 12 ಗಂಟೆಯವರೆಗೂ ಮುಂದುವರಿದು, ಬಳಿಕ ಸ್ವಲ್ಪ ಸಮಯದ ವಿರಾಮದ ನಂತರ ಮತ್ತೆ ರಾತ್ರಿ 2 ಗಂಟೆಯಿಂದ ನಸುಕಿನವರೆಗೂ ಸುರಿಯಿತು.

ನಿರಂತರ ಮಳೆಯಿಂದಾಗಿ ನಗರದ ಹಲವು ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ಪರದಾಡುವಂತಾಯಿತು. ನಗರ ಹೃದಯಭಾಗದ ಕೆಆರ್ ಮಾರ್ಕೆಟ್ ಪ್ರದೇಶದ ರಸ್ತೆಗಳು ನೀರಿನಲ್ಲಿ ಮುಳುಗಿದವು. ಹಳ್ಳಿಗಳಲ್ಲಿ ಮೊಣಕಾಲು ಮಟ್ಟದ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಂದರೆಯಾಯಿತು.

ರಿಚ್ಮಂಡ್ ರಸ್ತೆ, ಶಾಂತಿನಗರ ಹಾಗೂ ರಿಚ್ಮಂಡ್‌ಟೌನ್ ಪ್ರದೇಶಗಳು ನದಿಯಂತಾಗಿದ್ದು, ರಸ್ತೆಗಳ ಮೇಲೆ ಎರಡು ಅಡಿ ನೀರು ತುಂಬಿಕೊಂಡು ವಾಹನ ಸವಾರರು ಕಷ್ಟ ಅನುಭವಿಸಿದರು. ವಿಕ್ಟೋರಿಯಾ ರಸ್ತೆ ಹಾಗೂ ಹೆಚ್‌ಎಎಲ್ ಪ್ರದೇಶಗಳಲ್ಲೂ ನೀರು ತುಂಬಿಕೊಂಡು ಸಂಚಾರ ಸ್ಥಗಿತಗೊಂಡಿತು. ಕೆಲವು ವಾಹನಗಳು ನೀರಿನಲ್ಲಿ ಕೆಟ್ಟು ನಿಂತ ದೃಶ್ಯಗಳು ಕಂಡುಬಂದವು.

ಮಳೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow