BBK11: ಬೀಪ್ ಪದ ಬಳಕೆ: ಈ ವಾರವೇ ಹೊರ ಹೋಗ್ತಾರಾ ರಜತ್ ಬುಜ್ಜಿ!?

ಬಿಗ್ ಬಾಸ್' ಕನ್ನಡ ಸೀಸನ್ 11ರ ಶೋಗೆ ಅದ್ಯಾಕೋ ಅವಾಚ್ಯ ಶಬ್ದಗಳ ನಂಟು ಜೋರಾಗಿಯೇ ಇರುವಂತಿದೆ. ಆರಂಭದಲ್ಲಿ ಎಲ್ಲರ ಗಮನಸೆಳೆದಿದ್ದ 'ವಕೀಲ್ ಸಾಬ್' ಜಗದೀಶ್ ಅವರು ಮನೆಯಲ್ಲಿರುವ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡಿದ್ದರು. ಆನಂತರ ಅವರು ಶೋನಿಂದಲೇ ಎಲಿಮಿನೇಟ್ ಆಗಬೇಕಾಯಿತು. ಇದೀಗ ಮತ್ತೊಮ್ಮೆ ಆ ರೀತಿಯ ವರ್ತನೆಯನ್ನು ರಜತ್ ಕಿಶನ್ ತೋರಿದ್ದಾರೆ.
ಇಬ್ಬರೂ ಗೇಮ್ ಚೇಂಜರ್ಗಳಂತೆ ಕಾಣುತ್ತಿದ್ದು, ತಮ್ಮ ಆಟದ ಶೈಲಿಯ ಮೂಲಕ ಒಂದೇ ವಾರದಲ್ಲಿಯೇ ಜನರ ಮೇಲೆ ಪ್ರಭಾವ ಬೀರಿದ್ದಾರೆ.
ರಜತ್ ಕಿಶನ್ ಮತ್ತು ಗೋಲ್ಡ್ ಸುರೇಶ್ ನಡುವೆ ಟಾಸ್ಕ್ ಮಧ್ಯೆ ಒಂದು ಬಿಗ್ ಫೈಟ್ ನಡೆಯಿತು. ಈ ವೇಳೆ ರಜತ್ ತಮ್ಮ ನಿಯಂತ್ರಣ ಕಳೆದುಕೊಂಡಂತಿತ್ತು. ಜಗಳದ ವೇಳೆ ರಜತ್ ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ ಎಂಬುದು ಸುರೇಶ್ ಸೇರಿದಂತೆ ಮನೆಯ ಇತರ ಸ್ಪರ್ಧಿಗಳ ಆರೋಪವಾಗಿದೆ.
ಈ ರೀತಿ ಪದೆ ಪದೇ ಕೆಟ್ಟ ಪದಗಳನ್ನು ಬಳಸಿಯೇ ಲಾಯರ್ ಜಗದೀಶ್ ಮನೆಯಿಂದ ಆಚೆ ಹೋಗಿದ್ದರು. ಇದೀಗ ರಜತ್ ಕೂಡ ಸುಲಭವಾಗಿ ಆವೇಶಕ್ಕೆ ಒಳಗಾಗುತ್ತಿದ್ದಾರೆ.
ಟಾಸ್ಕ್ ಬಳಿಕ ವಾರದ ಕಳಪೆ ಮತ್ತು ಉತ್ತಮ ಪಟ್ಟ ಕೊಡುವ ಸಮಯದಲ್ಲಿಯೂ ರಜತ್ ಮತ್ತೇ ಅದೆ ಕೆಟ್ಟ ಪದ ಬಳಸಿ ಸುರೇ ಅವರನ್ನ ನಿಂದಿಸಿದ್ದಾರೆ. ಈ ಹಿನ್ನೆಲೆ ಸುದೀಪ್ ವಾರದ ಪಂಚಾಯ್ತಿಯಲ್ಲಿ ವಿಚಾರವನ್ನು ಪ್ರಸ್ತಾಪ ಮಾಡಬಹುದು ಎಂಬುದು ಹಲವು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯ.
ಅಲ್ಲದೇ ಇದೇ ರೀತಿ ಪದೆ ಪದೇ ಕೆಟ್ಟ ಪದಗಳನ್ನು ಬಳಸಿದರೆ ಮುಂದೊಂದು ದಿನ ರಜತ್ ಅವರ ಆಟದ ಮೇಲೆ ನೆಗೆಟಿವ್ ಎಫೆಕ್ಟ್ ಬೀಳಬಹುದು ಎಂಬುದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯ ವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






