IPL 2025: ಪದೇ-ಪದೇ ಗಾಯ: ಮ್ಯಾಕ್ಸ್ ವೆಲ್ ಮತ್ತೆ RCBಗೆ ಬಂದ್ರೆ ಕಥೆ ಏನು!? ಹರಾಜಿನಲ್ಲಿ ಕೈ ಬಿಡೋದು ಒಳ್ಳೇದಾ!?

ನವೆಂಬರ್ 23, 2024 - 18:04
 0  19
IPL 2025: ಪದೇ-ಪದೇ ಗಾಯ: ಮ್ಯಾಕ್ಸ್ ವೆಲ್ ಮತ್ತೆ RCBಗೆ ಬಂದ್ರೆ ಕಥೆ ಏನು!? ಹರಾಜಿನಲ್ಲಿ ಕೈ ಬಿಡೋದು ಒಳ್ಳೇದಾ!?

IPL ಮೆಘಾ ಹರಾಜಿಗೆ ಕೌಂಟ್ ಡೌನ್ ಶುರುವಾಗಿದ್ದು, ಎಲ್ಲಾ ಪ್ರಾಂಚೈಸಿಗಳು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ. 

ಅದರಂತೆ RCB ಕೂಡ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ. ಮೆಗಾ ಹರಾಜಿನಲ್ಲಿ ಆರ್​ಟಿಎಮ್ ಕಾರ್ಡ್​ ಬಳಸಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದುಕೊಂಡಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಇಂಜುರಿಗೆ ತುತ್ತಾಗಿದ್ದಾರೆ. ಇದರಿಂದ ಮ್ಯಾಕ್ಸ್‌ವೆಲ್ ಕೆಲವು ದಿನ ಕ್ರಿಕೆಟ್​ನಿಂದ ದೂರ ಉಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ವಾಸ್ತವವಾಗಿ ಕಳೆದ ಕೆಲವು ವರ್ಷಗಳಿಂದ ಮ್ಯಾಕ್ಸ್‌ವೆಲ್ ಅವರು ಪದೇ ಪದೇ ಇಂಜುರಿಗೆ ಒಳಗಾಗುತ್ತಿದ್ದಾರೆ. ಇದರಿಂದ ಅವರು ಹಲವು ಪ್ರಮುಖ ಸರಣಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಅವರ ಫಾರ್ಮ್​ ಕೂಡ ಕಳವಳಕಾರಿಯಾಗಿದೆ. ಇದೆಲ್ಲದರ ನಡುವೆಯೂ ಮ್ಯಾಕ್ಸ್‌ವೆಲ್ ಅವರನ್ನು ಆರ್​ಸಿಬಿ, ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಆದರೆ ಸದಾ ಇಂಜುರಿಯಿಂದಲೇ ಕ್ರಿಕೆಟ್​ನಿಂದ ದೂರ ಉಳಿಯುತ್ತಿರುವ ಮ್ಯಾಕ್ಸ್‌ವೆಲ್ ಅವರನ್ನು ಆರ್​ಸಿಬಿ ನಂಬುವುದಾದರು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಪಾಕಿಸ್ತಾನ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿರುವ ಮ್ಯಾಕ್ಸ್‌ವೆಲ್, ಒಂದು ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿಯಬಹುದು ಎಂದು ವರದಿಯಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow