BBK11: ಲಾಯರ್ ಜಗದೀಶ್ ಮತ್ತೆ ಬಿಗ್ ಬಾಸ್ ಮನೆಗೆ!? ಗುಟ್ಟು ಬಿಚ್ಚಿಟ್ಟ ಹಂಸಾ!

ಅಕ್ಟೋಬರ್ 31, 2024 - 20:00
 0  34
BBK11: ಲಾಯರ್ ಜಗದೀಶ್ ಮತ್ತೆ ಬಿಗ್ ಬಾಸ್ ಮನೆಗೆ!? ಗುಟ್ಟು ಬಿಚ್ಚಿಟ್ಟ ಹಂಸಾ!

ಬಿಗ್ ಬಾಸ್ ಸೀಸನ್ 11 ರಲ್ಲಿ ಲಾಯರ್ ಜಗದೀಶ್ ಹಾಗೂ ಹಂಸಾ ಜೋಡಿಯನ್ನು ಜನತೆ ಎಂಜಾಯ್ ಮಾಡುತ್ತಿದ್ದರು. ಆದರೆ ಈಗ ಇಬ್ಬರು ಮನೆಯಲ್ಲಿ ಇಲ್ಲ. ಒಬ್ಬರು ಹೆಣ್ಣು ಮಕ್ಕಳ ಮೇಲೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಬಿಗ್ ಬಾಸ್ ಜಗದೀಶ್ ರನ್ನು ಹೊರಗೆ ಹಾಕಿತ್ತು. ಆದರೆ ಹಂಸಾ ಕಳೆದ ವಾರ ಎಲಿಮಿನೇಟ್ ಆಗಿದ್ದರು. 

ಹೊರ ಬಂದ ಬಳಿಕ ಹಂಸಾ ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿದ್ದಾಗ ಹಂಸಾ ಹಾಗೂ ಲಾಯರ್ ಜಗದೀಶ್​ ಒಳ್ಳೆಯ ಸ್ನೇಹಿತರಾಗಿದ್ದರು. ಗಲಾಟೆ ಮಾಡುತ್ತಾ ಮಾಡುತ್ತಾ ಒಳ್ಳೆಯ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಕಿಚ್ಚ ಸುದೀಪ್​ ಮುಂದೆಯೂ ಈ ಇಬ್ಬರು ಡ್ಯಾನ್ಸ್​ ಮಾಡಿ ವೀಕ್ಷಕರ ಮೂಖದಲ್ಲಿ ನಗು ಹುಟ್ಟಿಸಿದ್ದರು.

ಆದರೆ ಅದು ಜಾಸ್ತಿ ದಿನಗಳ ಕಾಲ ಉಳಿಯಲಿಲ್ಲ. ಲಾಯರ್ ಜಗದೀಶ್​ ಅವರು ಮಹಿಳಾ ಸ್ಪರ್ಧಿಗಳಿಗೆ ಬೈದಿದ್ದಕ್ಕೆ ಬಿಗ್​ಬಾಸ್​ ಮನೆಯಿಂದ ಔಟ್​ ಆಗಿದ್ದರು. ಅಲ್ಲದೇ ಲಾಯರ್​ ಜಗದೀಶ್ ಅವರನ್ನು ತಳ್ಳಿದ ಕಾರಣಕ್ಕೆ ರಂಜಿತ್​ ಅವರನ್ನು ಆಚೆ ಕಳುಹಿಸಲಾಗಿತ್ತು. ಈ ಬಗ್ಗೆ ಮಾತಾಡಿದ ಹಂಸ ಅವರು ಲಾಯರ್ ಜಗದೀಶ್​ ಅವರ ಮತ್ತೆ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಡಬೇಕು ಅಂತ ಹೇಳಿದ್ದಾರೆ. 

ನನಗೆ ಬಿಗ್​ಬಾಸ್​ ಮನೆಯಲ್ಲಿ ಅವರ ಜೊತೆಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಈಗ ಆಚೆ ಬಂದಿದ್ದೀನಿ. ಅವರು ಮನೆಗೆ ಹೋಗ್ತೀನಿ. ಜಗದೀಶ್​ ಅವರ ಜೊತೆಗೆ ಮಾತಾಡಬೇಕು. ಯಾಕೆ ನನ್ನ ಬಗ್ಗೆ ಹಾಗೇ ಹೇಳಿದ್ರಿ ಅಂತ ಪ್ರಶ್ನೆ ಮಾಡ್ತೀನಿ. ಬಿಗ್​ಬಾಸ್​ ಮನೆಗೆ ಜಗದೀಶ್​ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಗೆಲ್ಲುತ್ತಾರೆ. ಜಗದೀಶ್​ ಅವರು ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟು ಬಂದ್ರೆ ಸಖತ್​ ಮಜಾ ಇರುತ್ತೆ. ನನಗೆ ಅನಿಸುತ್ತೆ ಜಗದೀಶ್​ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರೆ. ಮಾತಲ್ಲಿ ಸ್ವಲ್ಪ ಹಿಡಿತವಿದ್ದರೆ ಜಗದೀಶ್​ ಅವರೇ ಬಿಗ್​ಬಾಸ್ ವಿನ್ನರ್​ ಆಗ್ತಾರೆ ಅಂತ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow