BBK11: ಕ್ಯೂಟ್ ಜೋಡಿ ಮಧ್ಯೆ ಕಿಚ್ಚು: ಧರ್ಮ-ಅನುಷಾ ಮಧ್ಯೆ ನೇರ ನಾಮಿನೇಷನ್ ಬೆಂಕಿ!

ನವೆಂಬರ್ 12, 2024 - 20:03
 0  17
BBK11: ಕ್ಯೂಟ್ ಜೋಡಿ ಮಧ್ಯೆ ಕಿಚ್ಚು: ಧರ್ಮ-ಅನುಷಾ ಮಧ್ಯೆ ನೇರ ನಾಮಿನೇಷನ್ ಬೆಂಕಿ!

ಕನ್ನಡದ ಬಿಗ್​ಬಾಸ್​ ಸೀಸನ್​ 11, 7ನೇ ವಾರಕ್ಕೆ ಕಾಲಿಟ್ಟಿದೆ. ಬರೋಬ್ಬರಿ 6 ವಾರ ಬಿಗ್​ಬಾಸ್​ ಮನೆಯಲ್ಲಿ ಜೊತೆಯಾಗಿದ್ದ ಸ್ಪರ್ಧಿಗಳ ಮಧ್ಯೆ ಮತ್ತೆ ವೈಮನಸ್ಸು ಮೂಡಿದೆ. 

ಬಿಗ್​​ಬಾಸ್​ ವೀಕ್ಷಕರಿಗೆ ಈ ವಾರ ಜೋಡಿಗಳಿಂದ ಸಖತ್ ಎಂಟರ್ಟೈನ್ಮೆಂಟ್ ಸಿಗುತ್ತಿದೆ. ಗೇಮ್ ಪ್ಲಾನಿಂಗ್ ಶೈಲಿಯನ್ನು ಬಿಗ್​ಬಾಸ್​​ ಬದಲಾಯಿಸಿಕೊಂಡಿದ್ದು, ಸ್ಪರ್ಧಿಗಳನ್ನ ಜೋಡಿಗಳಾಗಿ ವಿಂಗಡಿಸಿದ್ದಾರೆ.

ಬಿಗ್​ಬಾಸ್ ನೀಡಿದ ಟಾಸ್ಕ್​ನಂತೆ ಮನೆಯಲ್ಲಿ ನೇರ ನಾಮಿನೇಷನ್​ ಪ್ರಕ್ರಿಯೆ ನಡೆಯುತ್ತಿದೆ. ಮೊದಲು ಧನರಾಜ್ ಅವರು, ಗೋಲ್ಡ್​ ಸುರೇಶ್ ಹಾಗೂ ಅನುಷಾ ಹೆಸರನ್ನು ತೆಗೆದುಕೊಳ್ತಾರೆ. ಐಶ್ವರ್ಯ, ಗೌತಮಿ, ಚೈತ್ರಾ, ಧರ್ಮ, ಮೋಕ್ಷಿತಾ ಸೇರಿದಂತೆ ಬಹುತೇಕ ಸ್ಪರ್ಧಿಗಳು ಅನುಷಾ ಅವರನ್ನು ನಾಮಿನೇಟ್ ಮಾಡ್ತಾರೆ.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅನುಷಾ.. ಪ್ರತಿಯೊಬ್ಬರಿಗೂ ಪ್ರಶ್ನೆಗಳನ್ನು ಕೇಳ್ತಾರೆ. ಮೋಕ್ಷಿತಾ ಅವರೇ ನೀವು ಎಷ್ಟು ಎಂಟರ್ಟೈನಿಂಗ್ ಆಗಿದ್ದೀರಾ? ಎಂದು ತರಾಟೆಗೆ ತೆಗೆದುಕೊಳ್ತಾರೆ. ನಂತರ ಧರ್ಮ ವಿಚಾರಕ್ಕೆ ಬರ್ತಾರೆ. ಅಗ್ರೇಷನ್ ಕಮ್ಮಿ ಆಯ್ತು ಎಂದು ನನಗೆ ಕೇಳ್ತೀರಿ. ನಿಮಗೆ ಎಷ್ಟು ಅಗ್ರೇಷನ್ ಇದೆ? ಧರ್ಮ ನೀವು ಏನೂ ಆಟ ಆಡಿಯೇ ಇಲ್ಲ. ನೀವು ಎಷ್ಟು ಇನ್ವಾಲ್ ಆಗಿದ್ದೀರಾ? ಎಂದು ತೀವ್ರ ವಾದ ಮಾಡ್ತಾರೆ. ಅದಕ್ಕೆ ಸಮರ್ಥನೆ ಮಾಡಿಕೊಳ್ಳಲು ಹೋದ ಧರ್ಮ.. ಆಯ್ತು, ನಾನೇ ಹೇಳ್ತಿದ್ದೀನಲ್ಲ. ಎಲ್ಲರೂ ನಾಲಯಕ್ ಎಂದು ಕ್ಯಾಕರಿಸಿ ಉಗಿದ ಮೇಲೆ ಬೇವರ್ಸಿ ಅಂತಾನೇ ಹೇಳ್ರಲ್ಲ ಎಂದಿದ್ದಾರೆ.

ಪ್ರೊಮೋ ನೋಡಿದ ಬಿಗ್​ಬಾಸ್ ವೀಕ್ಷಕರು ಅನುಷಾ ಮತ್ತು ಧರ್ಮಗೆ ಆಗಿದ್ದೇನು? ಮನೆಯಲ್ಲಿ ಈ ಜೋಡಿ ಚೆನ್ನಾಗಿಯೇ ಇತ್ತು. ಇದ್ದಕ್ಕಿದ್ದಂತೆ ಇಬ್ಬರ ಮುನಿಸಿಗೆ ಕಾರಣವೇನು ಎಂಬ ಚರ್ಚೆ ಶುರು ಮಾಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow