BBK11: ಮಿಡ್ ವೀಕ್ ಎಲಿನಿಮೇಷನ್: ಟಾಸ್ಕ್, ಗೆದ್ದವರ್ಯಾರು.? ಸೋತವರ್ಯಾರು.?

ಜನವರಿ 14, 2025 - 20:00
 0  13
BBK11: ಮಿಡ್ ವೀಕ್ ಎಲಿನಿಮೇಷನ್: ಟಾಸ್ಕ್, ಗೆದ್ದವರ್ಯಾರು.? ಸೋತವರ್ಯಾರು.?

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಈಗ ಅಂತಿಮ ದಿನಗಳ ಲೆಕ್ಕಾಚಾರದಲ್ಲಿದ್ದು, ಸ್ಪರ್ಧಿಗಳು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದ್ದಾರೆ. ಕಳೆದ ವಾರ ಟಿಕೆಟ್‌ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ನಡೆಸಿದ್ದ ಸ್ಪರ್ಧಿಗಳು ಈ ವಾರ ನಾಮಿನೇಷನ್‌ನಿಂದ ಪಾರಾಗಲು ಹೋರಾಡುತ್ತಿದ್ದಾರೆ. ಈ ವಾರ ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರಲ್ಲಿ ಒಂದೇ ವಾರದಲ್ಲಿ ಎರಡು ಎಲಿಮಿನೇಷನ್‌ಗಳು ನಡೆಯಲಿದೆ. ವಾರದ ಮಧ್ಯವೇ ಎಲಿಮಿನೇಷನ್‌ ನಡೆಯಲಿದ್ದು, ವೀಕೆಂಡ್‌ ಸಂಚಿಕೆಗೂ ಮುನ್ನ ಒಬ್ಬರು ಮನೆಗೆ ಹೋಗುವಂತೂ ಗ್ಯಾರಂಟಿಯಾಗಿದೆ.

ಇದೀಗ ಸ್ಪರ್ಧಿಗಳು ಬಿಗ್​ಬಾಸ್​ ಕೊಡುವ ಟಾಸ್ಕ್​ಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ಇನ್ನೂ ನಿನ್ನೆಯ ಸಂಚಿಕೆಯಲ್ಲಿ ಧನರಾಜ್​ ಬಿಗ್​ಬಾಸ್​ ಕೊಟ್ಟ ಟಾಸ್ಕ್​ವೊಂದರಲ್ಲಿ ವಿನ್​ ಆಗಿದ್ದಾರೆ. ಧನರಾಜ್​ ಅವರು ಯಾವ ಸ್ಪರ್ಧಿಯ ಹೆಸರನ್ನು ಸೂಚಿಸುತ್ತಾರೋ ಅವರೇ ಆ ಟಾಸ್ಕ್​ ಆಡಬೇಕು. ಅದರಲ್ಲೂ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ, ಇದು ​ಮಿಡ್‌ ವೀಕ್ ಎಲಿಮಿನೇಷನ್​ನಿಂದ ತಮ್ಮನ್ನು ತಾವು ಉಳಿಸಿಕೊಳ್ಳಲು ಇರುವ ಕೊನೆಯ ಟಾಸ್ಕ್ ಎಂದು ಭಯ ಹುಟ್ಟಿಸಿದ್ದಾರೆ. ವಾರದ ಮಧ್ಯ ಭಾಗದಲ್ಲಿ ಮನೆಯಿಂದ ಹೊರ ಹೋಗದೆ ಉಳಿದುಕೊಂಡವರು ಯಾರು? ಬಿಗ್​ಬಾಸ್ ಹೊಸ ಪ್ರೋಮೊ ಬಿಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow