Bigg Boss Kannada: ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದು ಹೋದ ಅಧ್ಯಾಯ: ಕಿಚ್ಚ ಸುದೀಪ್

ಅಕ್ಟೋಬರ್ 20, 2024 - 13:57
ಅಕ್ಟೋಬರ್ 20, 2024 - 11:16
 0  34
Bigg Boss Kannada: ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದು ಹೋದ ಅಧ್ಯಾಯ: ಕಿಚ್ಚ ಸುದೀಪ್

ಬಿಗ್ಬಾಸ್ ಕನ್ನಡ ಸೀಸನ್ 11 ವೀಕೆಂಡ್ ಪಂಚಾಯಿತಿ ನಿನ್ನೆ ನಡೆದಿದೆ. ಈ ವಾರ ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಮನೆಯಲ್ಲಿ ದೊಡ್ಡ ಜಗಳವೇ ನಡೆದು ಇಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ. ಇದೀಗ ಸುದೀಪ್, ಮನೆಯ ಇತರ ಸದಸ್ಯರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಗದೀಶ್ ಅವರನ್ನು ಬಿಗ್ ಬಾಸ್​ ಮನೆಯಿಂದ ಎಲಿಮಿನೇಟ್ ಮಾಡಿರುವುದು ಗೊತ್ತೇ ಇದೆ.

ಅವರನ್ನು ಬಿಗ್ ಬಾಸ್ ಅವರೇ ಎಲಿಮಿನೇಟ್ ಮಾಡಿದ್ದಾರೆ. ಇದು ನಿಜಕ್ಕೂ ಶಾಕಿಂಗ್ ಆಗಿದೆ. ಮಹಿಳಾ ಸ್ಪರ್ಧಿಗಳ ವಿರುದ್ಧ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಇದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಅವರು ಎಲಿಮಿನೇಟ್ ಆಗಿದ್ದು, ಮತ್ತೆ ಬರಬೇಕು ಎನ್ನುವ ಕೂಗು ಇದೆ.

ಇದರ ಬೆನ್ನಲ್ಲೇ ಸುದೀಪ್ ಅವರು ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ‘ನಾನು ಜಗದೀಶ್​ ಅವರನ್ನು ಕ್ಲೀನ್ ಮಾಡಲು ಅಥವಾ ಅವರು ಮಾಡಿದ್ದು ತಪ್ಪಲ್ಲ ಎಂದಲ್ಲ ಹೇಳಲು ಇಲ್ಲಿ ನಿಂತಿಲ್ಲ. ಅವರ ಮಾತಿನ ಮೇಲೆ ನಿಗಾ ಇರಲಿಲ್ಲ. ಈ ಕಾರಣದಿಂದ ಅವರು ಎಲಿಮಿನೇಟ್ ಆದರು. ಇದನ್ನು ಬಿಗ್ ಬಾಸ್ ಸಹಿಸಲ್ಲ. ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದು ಹೋದ ಅಧ್ಯಾಯ’ ಎಂದು ಹೇಳಿದ್ದಾರೆ. ಇದರಿಂದ ಜಗದೀಶ್ ಅವರು ಮರಳಿ ಬರೋದಿಲ್ಲ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow