BiggBoss Kannada 12: ದೆವ್ವದ ಕಥೆ ಕಟ್ಟಿ ರಂಪಾಟ ಮಾಡ್ತಿರೋ ಅಶ್ವಿನಿ: ದೆವ್ವ ಬಿಡಿಸೋಕೆ ಬಂದ ಕಿಚ್ಚ!
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾಗಿ ಕೇವಲ ಮೂರು ವಾರಗಳಾದರೂ, ಈಗಾಗಲೇ ಮೊದಲ ಗ್ರ್ಯಾಂಡ್ ಫಿನಾಲೆ ಸದ್ದು ಕೇಳಿಬರುತ್ತಿದೆ. ಸ್ಪರ್ಧಿಗಳ ಮಧ್ಯೆ ನಡೆಯುತ್ತಿರುವ ವಾಗ್ವಾದಗಳು, ‘ದೆವ್ವ’ ವಿಚಾರ, ಮತ್ತು ಕಿಚ್ಚ ಸುದೀಪ್ ಅವರ ಎಂಟ್ರಿ..
ಈ ವಾರ ಮನೆಯಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾದ ವಿಷಯ ‘ದೆವ್ವ’ ಆಗಿದ್ದು, ಅದರ ಹಿನ್ನೆಲೆಯಲ್ಲಿ ಅನೇಕ ವಾಗ್ವಾದಗಳು ಮತ್ತು ಗಲಾಟೆಗಳು ನಡೆದಿವೆ. ಈಗ ಪ್ರೇಕ್ಷಕರು “ಯಾರು ಸೇಫ್ ಆಗ್ತಾರೆ? ಯಾರು ಎಲಿಮಿನೇಟ್ ಆಗ್ತಾರೆ?” ಎಂಬ ಕುತೂಹಲದಲ್ಲಿ ತೊಡಗಿದ್ದಾರೆ.
ಪ್ರೋಮೋ ಪ್ರಕಾರ, ಕಿಚ್ಚ ಸುದೀಪ್ ಈ ವಾರದ ಗ್ರ್ಯಾಂಡ್ ಫಿನಾಲೆಗೆ ಖಡಕ್ ಎಂಟ್ರಿ ನೀಡಿದ್ದಾರೆ. ಅವರು ಸ್ಪರ್ಧಿಗಳ ವರ್ತನೆ ಕುರಿತು ನೇರವಾಗಿ ತರಾಟೆ ತೆಗೆದುಕೊಳ್ಳಲಿದ್ದಾರೆ ಎಂದು ತೋರುತ್ತಿದೆ. “ನಾವು ಕೊಟ್ಟ ಮಾತು ತಪ್ಪಲ್ಲ. ತಪ್ಪಾಗಿ ಆಡಿದ ಮಾತಿಗೂ ಬುದ್ದಿ ಕಲಿಸದೇ ಬಿಡಲ್ಲ. ಒಳ್ಳೆಯ ಕೆಲಸ ಮಾಡಿದಾಗ ಚಪ್ಪಾಳೆ ಕೊಡ್ತೀವಿ, ಆದರೆ ಮಿತಿಮೀರಿ ಮಾತನಾಡಿದವರಿಗೆ ಬುದ್ದಿ ಕಲಿಸುತ್ತೀವಿ” ಎಂದು ಕಿಚ್ಚ ಖಡಕ್ ಶೈಲಿಯಲ್ಲಿ ಹೇಳಿರುವ ದೃಶ್ಯಗಳು ಪ್ರೋಮೋದಲ್ಲಿ ಗಮನಸೆಳೆದಿವೆ.
ಫ್ಯಾನ್ಸ್‌ಗಳು ಈಗ ಕಿಚ್ಚ ಅವರ ತರಾಟೆಗೆ ಫಿದಾ ಆಗಿದ್ದು, ವಿಶೇಷವಾಗಿ ಜಾಹ್ನವಿ ಮತ್ತು ಅಶ್ವಿನ್ ಅವರಿಗೆ ಕಿಚ್ಚ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬುದರತ್ತ ಕಣ್ಣಿಟ್ಟಿದ್ದಾರೆ. ಈ ವಾರದ ಮೊದಲ ಗ್ರ್ಯಾಂಡ್ ಫಿನಾಲೆಯಲ್ಲಿ ಯಾರು ಎಲಿಮಿನೇಟ್ ಆಗ್ತಾರೆ? ಹಾಗೂ “ದೆವ್ವ”ದ ಕತೆ ಯಾರಿಂದ ಬಿಡಿಸಲ್ಪಡುತ್ತದೆ? ಎಂಬುದನ್ನು ತಿಳಿಯಲು ಪ್ರೇಕ್ಷಕರು ಆತುರದಿಂದ ಕಾಯುತ್ತಿದ್ದಾರೆ.
ಕರಾವಳಿ ಮೂಲದ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಕಷ್ಟಪಟ್ಟು ಕನ್ನಡ ಮಾತನಾಡುವ ಪ್ರಯತ್ನ ಮಾಡುತ್ತಾರೆ. ಅವರ ಮಾತಿಗೆ ದೊಡ್ಡ ಬಳಗವೇ ಸೃಷ್ಟಿ ಆಗಿದೆ. ಈಗ ರಕ್ಷಿತಾ ಶೆಟ್ಟಿ ಅವರಿಗೆ ಅಶ್ವಿನಿ ಹಾಗೂ ಜಾನ್ವಿ ಕಿರುಕುಳ ನೀಡುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ರಕ್ಷಿತಾ ಖಡಕ್ ಆಗಿ ತಿರುಗೇಟು ಕೊಟ್ಟಿದ್ದಾರೆ. ಸುದೀಪ್ ಅವರು ಈ ವಿಚಾರವನ್ನು ಕೈಗೆತ್ತಿಕೊಂಡು ಜಾನ್ವಿ ಹಾಗೂ ಅಶ್ವಿನಿಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂಬುದು ಅನೇಕರ ಕೋರಿಕೆ.
ಅಶ್ವಿನಿ ಹಾಗೂ ಜಾನ್ವಿ ಅವರು ಬಿಗ್ ಬಾಸ್ ಮನೆಯಲ್ಲಿ ಗೆಜ್ಜೆ ಶಬ್ದ ಮಾಡಿ, ಅದನ್ನು ರಕ್ಷಿತಾ ಮೇಲೆ ಹಾಕಿದ್ದರು. ‘ರಕ್ಷಿತಾ ನಾಗವಲ್ಲಿ ರೀತಿ ಆಡ್ತಾರೆ’ ಎಂದೆಲ್ಲ ಆರೋಪ ಮಾಡಿದ್ದರು. ಇದೇ ವಿಚಾರ ಇಟ್ಟುಕೊಂಡ ವಾರ ಪೂರ್ತಿ ಎಳೆದಾಡಿದ್ದರು. ರಕ್ಷಿತಾಗೆ ಪದೇ ಪದೇ ಕಿರುಕುಳ ಕೊಡುವ ಪ್ರಯತ್ನ ಮಾಡಿದ್ದರು. ಈ ವಿಚಾರದಲ್ಲಿ ಸುದೀಪ್ ಅವರು ರಕ್ಷಿತಾ ಪರ ವಹಿಸಿಕೊಂಡು ಮಾತನಾಡಲೇಬೇಕಿದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?