Biklu Shiva Murder Case: ಭೈರತಿ ಬಸವರಾಜ್ ಅಣ್ಣನ ಮಗ ಅನಿಲ್ ಖಾಕಿ ವಶಕ್ಕೆ!

ಜುಲೈ 21, 2025 - 11:59
 0  17
Biklu Shiva Murder Case: ಭೈರತಿ ಬಸವರಾಜ್ ಅಣ್ಣನ ಮಗ ಅನಿಲ್ ಖಾಕಿ ವಶಕ್ಕೆ!

ಬೆಂಗಳೂರು: ರಾಜ್ಯದೆಲ್ಲೆಡೆ ಸಂಚಲನ ಉಂಟುಮಾಡಿರುವ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಮತ್ತೆ ಮಹತ್ವದ ಬೆಳವಣಿಗೆ ನಡೆದಿದೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರು ಅರುಣ್ ಮತ್ತು ನವೀನ್ ಎಂದು ಗುರುತಿಸಲಾಗಿದ್ದು,

ಇಬ್ಬರೂ ಪ್ರಕರಣದ ಎ1 ಆರೋಪಿ ಜಗದೀಶನ ಆಪ್ತ ಸಹಚರರಾಗಿದ್ದಾರೆ. ಕೊಲೆ ಬಳಿಕ ಇಬ್ಬರೂ ತಲೆಮರೆಸಿಕೊಂಡಿದ್ದರು.ಮಧ್ಯೆ, ಶಾಸಕರೊಬ್ಬರ ಕುಟುಂಬದ ಸದಸ್ಯರ ಹೆಸರು ಪ್ರಕರಣಕ್ಕೆ ತಳಕು ಹಾಕಿಕೊಂಡಿದೆ. ಬೈರತಿ ಬಸವರಾಜ್ ಅವರ ಸಹೋದರನ ಮಗ ಅನಿಲ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆ ಪ್ರಕರಣದ ಆರೋಪಿ ಬಳಿಗೆ ಅನಿಲ್ ತನ್ನ ಕಾರು ನೀಡಿದ್ದ ಎಂಬ ಮಾಹಿತಿ ಹೊರಬಿದ್ದಿದೆ.

ಹಿನ್ನೆಲೆ, ಅನಿಲ್‌ನ್ನು ಭಾರತಿನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬೈರತಿ ಬಸವರಾಜ್ ಅವರು ಕೂಡ ವಿಚಾರಣೆಗೆ ಹಾಜರಾಗಿದ್ದರು. ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳ್ಳುತ್ತಿದ್ದು, ಇನ್ನಷ್ಟು ಮಂದಿ ಆರೋಪಿಗಳ ಬಂಧನ ಸಾಧ್ಯತೆ ಇದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow