BoycottHHVM.. ಪವನ್ ಮೇಲೆ ಕೋಪಕೊಂಡ ಅಭಿಮಾನಿಗಳು: ಸಾಮಾಜಿಕ ಜಾಲತಾಣದಲ್ಲಿ ಬಾಯ್‌ಕಾಟ್ ಟ್ರೆಂಡ್

ಪವನ್ ಕಲ್ಯಾಣ್ ಪ್ರನಟಿಸಿರುವ ಬಹು ನಿರೀಕ್ಷಿತ ಐತಿಹಾಸಿಕ ಹಿನ್ನೆಲೆಯ ಚಿತ್ರ ‘ಹರಿ ಹರ ವೀರ ಮಲ್ಲು’ ನಾಳೆ ತೆರೆಗೆ ಬರಲಿದೆ. ಈ ಚಿತ್ರವು ಆರು ವರ್ಷಗಳ ನಂತರ ಬಿಡುಗಡೆ ಆಗುತ್ತಿರುವುದರ ಜೊತೆಗೆ, ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪವನ್ ಕಲ್ಯಾಣ್ ಅಭಿನಯಿಸುತ್ತಿರುವ ಮೊದಲ ಸಿನಿಮಾ ಎಂಬ ವಿಶೇಷತೆಯಿದೆ.
ಮೂರು ವರ್ಷಗಳ ಬಳಿಕ ಪವನ್ ಕಲ್ಯಾಣ್ ಸೋಲೋ ನಾಯಕನಾಗಿ ನಟಿಸಿರುವ ಈ ಸಿನಿಮಾ, ಅವರ ಮೊದಲ ಐತಿಹಾಸಿಕ ಚಿತ್ರವೂ ಹೌದು. ಚಿತ್ರರಂಗದ ಅಭಿಮಾನರು ಹಾಗೂ ಪವನ್ ಕಲ್ಯಾಣ್ ಸಪೋರ್ಟ್‌ರ್ಸ್ ನಡುವೆ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ನಿರ್ಮಾಣವಾಗಿದೆ.
ಆದರೆ ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ‘ಬಾಯ್‌ಕಾಟ್ ಎಚ್‌ಎಚ್‌ವಿಎಂ’ ಎಂಬ ಹ್ಯಾಷ್‌ಟ್ಯಾಗ್ ವೈರಲ್ ಆಗಿದೆ. ಆಂಧ್ರ ಪ್ರದೇಶದ ಪ್ರಮುಖ ವಿರೋಧ ಪಕ್ಷವಾದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ಮತ್ತು ಜಗನ್ ಮೋಹನ್ ರೆಡ್ಡಿಯ ಅಭಿಮಾನಿಗಳು ಈ ಟ್ರೆಂಡ್ ಆರಂಭಿಸಿದ್ದಾರೆ. “ಚಿತ್ರಮಂದಿರದಲ್ಲಿ ಹರಿ ಹರ ವೀರ ಮಲ್ಲು ಸಿನಿಮಾ ನೋಡಬೇಡಿ” ಎಂಬ ಮನವಿಯೊಂದರೊಂದಿಗೆ, ಕೆಲವರು ಬಾಯ್‌ಕಾಟ್ ಕರೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪವನ್ ಕಲ್ಯಾಣ್, “ಯಾವ ಕಾರಣಕ್ಕೆ ಬಾಯ್‌ಕಾಟ್ ಮಾಡುತ್ತಿದ್ದಾರೆ ಎಂಬುದೇ ಸ್ಪಷ್ಟವಿಲ್ಲ. ಇದು ವೈಯಕ್ತಿಕ ದ್ವೇಷದ ಫಲ. ಚಿತ್ರ ಪಕ್ಕಾ ಬಿಡುಗಡೆ ಆಗುತ್ತದೆ, ಅಭಿಮಾನಿಗಳು ಪಕ್ಕಾ ಸಿನಿಮಾ ನೋಡುತ್ತಾರೆ. ನಕಲಿ ಟ್ರೆಂಡ್‌ಗಳಿಗೆ ಬೆಲೆ ಕೊಡೋ ಅಗತ್ಯವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






