BREAKING : ಹಿರಿಯ ಸಾಹಿತಿ "ಎಸ್.ಎಲ್.ಭೈರಪ್ಪ" ಪಂಚಭೂತಗಳಲ್ಲಿ ಲೀನ!
ಕನ್ನಡ ಸಾಹಿತ್ಯ ಲೋಕದ ದೈತ್ಯ ಪ್ರತಿಭೆ.. ಅಕ್ಷರ ಲೋಕದ ತತ್ವಜ್ಞಾನಿ, ಸರಸ್ವತಿ ಸಮ್ಮಾನ್ ಪುರಸ್ಕೃತ, ಪದ್ಮಭೂಷಣ ಡಾ.ಎಸ್.ಎಲ್. ಭೈರಪ್ಪ ವಿಧಿವಶರಾಗಿದ್ದಾರೆ. ಇವತ್ತು ಪಂಚಭೂತಗಳಲ್ಲಿ ಭೈರಪ್ಪ ಲೀನರಾಗಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ಭೈರಪ್ಪ ಅವರ ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆದಿದ್ದು,
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ. ಅಂತಿಮ ವಿಧಿ ವಿಧಾನವನ್ನು ತಮ್ಮ ಪುತ್ರರು ಮಾಡಬಾರದು ಎಂದು ಭೈರಪ್ಪ ಅವರು ಬರೆದಿಟ್ಟಿದ್ದರು. ಹೀಗಾಗಿ ಅಗಲಿದ ಅಂತಿಮ ವಿಧಿ ವಿಧಾನ ಯಾರು ನೆರವೇರಿಸುತ್ತಾರೆ ಎಂಬ ಪ್ರಶ್ನೆ ಇತ್ತು. ಆದರೆ ಅಂತಿಮ ಪೂಜೆಯಲ್ಲಿ ಭೈರಪ್ಪ ಅವರ ಇಬ್ಬರು ಪುತ್ರರು ಭಾಗಿಯಾಗಿದ್ದರು.
ಪುತ್ರರಾದ ಉದಯ್ ಶಂಕರ್, ರವಿಶಂಕರ್ ಪೂಜೆಯಲ್ಲಿ ಕುಳಿತು ಅಂತಿಮ ಕಾರ್ಯ ನೆರವೇರಿಸಿದರು. ಹಿರಿಯ ಪುತ್ರ ರವಿಶಂಕರ್ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಂತ್ಯಕ್ರಿಯೆ ವೇಳೆ ಭೈರಪ್ಪರ ಹುಟ್ಟೂರಿನ ಜನ, ಕುಟುಂಬಸ್ಥರು ಭಾಗಿಯಾಗಿದ್ದರು. ಸಚಿವರಾದ ಹೆಚ್.ಸಿ.ಮಹದೇವಪ್ಪ, ವೆಂಕಟೇಶ್, ಎಂಎಲ್‌ಸಿ ಶಿವಕುಮಾರ್, ರಾಜಕೀಯ ನಾಯಕರು ಹಾಗೂ ವಿವಿಧ ಕ್ಷೇತ್ರ ಗಣ್ಯರು ಉಪಸ್ಥಿತರಿದ್ದು, ಕಂಬನಿ ಮಿಡಿದರು.
ನಿಮ್ಮ ಪ್ರತಿಕ್ರಿಯೆ ಏನು?