Darshan Case : ಹಾಸಿಗೆ-ದಿಂಬು ಕೊಡಿ ಪ್ಲೀಸ್: ಕೋರ್ಟ್ ಗೆ ದರ್ಶನ್ ಮನವಿ

ಆಗಸ್ಟ್ 30, 2025 - 16:34
 0  14
Darshan Case : ಹಾಸಿಗೆ-ದಿಂಬು ಕೊಡಿ ಪ್ಲೀಸ್: ಕೋರ್ಟ್ ಗೆ ದರ್ಶನ್ ಮನವಿ

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿರುವ ನಟ ದರ್ಶನ್ ಮತ್ತು ಇತರೆ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ಇಂದು 64ನೇ ಸೆಷನ್ಸ್ ಕೋರ್ಟ್ನಲ್ಲಿ ನಡೆಯಿತು. ವಿಚಾರಣೆ ವೇಳೆ ಜೈಲು ಅಧಿಕಾರಿಗಳು ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬೇಕೆಂದು ಮನವಿ ಮಾಡಿದರು. ಆದರೆ ದರ್ಶನ್ ಪರ ವಕೀಲರು ಇದಕ್ಕೆ ಆಕ್ಷೇಪಣೆ ಸಲ್ಲಿಸಿದರು. ಇದೇ ರೀತಿಯಾಗಿ ಆರೋಪಿ ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲರೂ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದರು.

ವಿಚಾರಣೆಯ ನಂತರ, ಕೋರ್ಟ್ ಅರ್ಜಿಯ ತೀರ್ಪನ್ನು ಸೆಪ್ಟೆಂಬರ್ 2ಕ್ಕೆ ಕಾಯ್ದಿರಿಸಿದೆ. ಇದೇ ದಿನ ನಟ ದರ್ಶನ್ ಅವರು ತಲೆದಿಂಬು ಹಾಗೂ ಬೆಡ್‌ಶೀಟ್ ನೀಡಬೇಕೆಂಬ ಬೇಡಿಕೆಯ ಕುರಿತಾದ ಅರ್ಜಿಯ ಮೇಲೂ ತೀರ್ಪು ಪ್ರಕಟವಾಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow