Darshan Case : ಇಂದು ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ! ಇಂದಾದ್ರೂ ಸಿಗುತ್ತಾ ಹಾಸಿಗೆ ಭಾಗ್ಯ?
ಬೆಂಗಳೂರು: ಕೊಲೆ ಪ್ರಕರಣದಲ್ಲಿ ಮತ್ತೆ ಜೈಲುಪಾಲಾಗಿರುವ ನಟ ದರ್ಶನ್ ಗೆ ಸೌಲಭ್ಯಗಳ ಕೊರತೆ ತಲೆನೋವಾಗಿದೆ. ಹಾಸಿಗೆ, ದಿಂಬು ಸೇರಿದಂತೆ ಕೆಲವು ಮೂಲಸೌಕರ್ಯಗಳನ್ನು ಕಲ್ಪಿಸದಿರುವ ಬಗ್ಗೆ ಅವರು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕಳೆದ ವಾರ ಕೋರ್ಟ್ ಆದೇಶದ ಮೇರೆಗೆ, ಜೈಲಿನ ಮ್ಯಾನ್ಯುಯಲ್ ಪ್ರಕಾರ ದರ್ಶನ್ ಅವರಿಗೆ ಜಮ್ಖಾನ, ದಿಂಬು ಹಾಗೂ ವಾಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಹಾಸಿಗೆಯನ್ನು ನೀಡಿಲ್ಲವೆಂದು ಆರೋಪಿಸಿ, ದರ್ಶನ್ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.
ದರ್ಶನ್ ಪರ ವಾದ ಮಂಡಿಸಿದ ವಕೀಲ ಸುನೀಲ್, “ದರ್ಶನ್ ಜೈಲು ಸೇರಿದ ಒಂದು ತಿಂಗಳು ಕಳೆದರೂ, ಇನ್ನೂ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲೇ ಇರಿಸಿದ್ದಾರೆ. ನಿಯಮ ಪ್ರಕಾರ 14 ದಿನಗಳ ಕಾಲ ಮಾತ್ರ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಬೇಕು. ಹಾಸಿಗೆ, ದಿಂಬು ಯಾವುದನ್ನೂ ನೀಡಿಲ್ಲ. ಅತ್ಯಂತ ಕನಿಷ್ಠ ಸೌಲಭ್ಯಗಳನ್ನೇ ಕಲ್ಪಿಸಿದ್ದಾರೆ” ಎಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ದರ್ಶನ್ ಕೂಡಾ ಬೇಸರ ವ್ಯಕ್ತಪಡಿಸಿದ್ದು, “ಜೈಲಿನಲ್ಲಿ ಸರಿಯಾಗಿ ನೋಡಿಕೊಳ್ಳುವುದಿಲ್ಲ. ನಾನು ಸಾಯ್ತೀನಿ, ವಿಷ ಕೊಟ್ಟುಬಿಡಿ” ಎಂದು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನ್ಯಾಯಾಲಯ ದರ್ಶನ್ ಅರ್ಜಿಯನ್ನು ಸ್ವೀಕರಿಸಿದ್ದು, ಇಂದು ವಿಚಾರಣೆ ನಡೆಯಲಿದೆ.
ನಿಮ್ಮ ಪ್ರತಿಕ್ರಿಯೆ ಏನು?