Hardik Pandya: ಹೊಸ ಗರ್ಲ್ʼಫ್ರೆಂಡ್ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್! ಯಾರು ಈ ಬೆಡಗಿ?
ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಮೈದಾನಕ್ಕಿಂತ ವೈಯಕ್ತಿಕ ವಿಷಯಗಳ ಕಾರಣದಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಪತ್ನಿ ನಟಾಶಾ ಸ್ಟಾಂಕೋವಿಕ್ ಜೊತೆ ವಿಚ್ಛೇದನ, ನಂತರ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಬ್ರೇಕ್‌ಅಪ್ ನಂತರ, ಇದೀಗ ಮತ್ತೊಬ್ಬ ನಟಿ-ಮಾಡೆಲ್ ಜೊತೆ ಹಾರ್ದಿಕ್ ಹೆಸರು ಜೋಡಣೆಗೊಂಡಿದೆ.
ಹಾರ್ದಿಕ್ ಪಾಂಡ್ಯ ಮಾಡೆಲ್ ಮತ್ತು ನಟಿ ಮಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಜೋರಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೆಲವು ಪೋಸ್ಟ್‌ಗಳು ಈ ಅಫವಾಹಕ್ಕೆ ಬಲ ತುಂಬಿವೆ.
ಮಹಿಕಾ ಶರ್ಮಾ ಇತ್ತೀಚೆಗೆ ಹಂಚಿಕೊಂಡಿರುವ ಸೆಲ್ಫಿಯಲ್ಲಿ ಹಾರ್ದಿಕ್ ಪಾಂಡ್ಯ ಹಿಂದೆ ನಿಂತಿರುವುದು ಕಾಣಿಸಿದ್ದು, ಆದರೆ ಅವರನ್ನು ಬ್ಲರ್ ಮಾಡಿದ್ದಾರೆ. ಇನ್ನೊಂದು ಫೋಟೋದಲ್ಲಿ ‘33’ ಅಂಕೆಯಿರುವ ಉಂಗುರವನ್ನು ತೋರಿಸಿದ್ದು, ಇದು ಹಾರ್ದಿಕ್ ಜರ್ಸಿ ನಂಬರ್ ಆಗಿರುವುದರಿಂದ ಅಭಿಮಾನಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅದಲ್ಲದೆ, ಇಬ್ಬರೂ ಒಂದೇ ರೀತಿ ಉಡುಗೆ ಧರಿಸಿರುವ ಪ್ರತ್ಯೇಕ ಚಿತ್ರಗಳನ್ನು ಹಂಚಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಫಾಲೋ ಮಾಡುತ್ತಿರುವುದೂ ಗಮನ ಸೆಳೆದಿದೆ.
ಮಹಿಕಾ ಶರ್ಮಾ ಯಾರು?
ಮಹಿಕಾ ಶರ್ಮಾ ಪ್ರಸಿದ್ಧ ಮಾಡೆಲ್ ಮತ್ತು ನಟಿ. ಅನೇಕ ಮ್ಯೂಸಿಕ್ ವಿಡಿಯೋ ಹಾಗೂ ಶಾರ್ಟ್ ಸಿನಿಮಾಗಳಲ್ಲಿ ನಟಿಸಿರುವ ಅವರು, ಹಲವು ಖ್ಯಾತ ವಿನ್ಯಾಸಕರ ಉತ್ಪನ್ನಗಳಿಗೆ ಮಾಡೆಲಿಂಗ್ ಮಾಡಿದ್ದಾರೆ. ‘ಮಾಡೆಲ್ ಆಫ್ ದಿ ಇಯರ್’ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಎಕನಾಮಿಕ್ಸ್ ಮತ್ತು ಫೈನಾನ್ಸ್‌ನಲ್ಲಿ ಪದವಿ ಪಡೆದಿರುವ ಮಹಿಕಾ, ಯೋಗ ಶಿಕ್ಷಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2024ರಲ್ಲಿ ಮೇಕಪ್ ಅಲರ್ಜಿಯಿಂದ ಬಳಲಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?