' Kothalavadi ' ಸಹ ನಟನಿಗೆ ಮಾತ್ರವಲ್ಲ, ನಟಿಗೂ ಸಂಭಾವನೆ ಕೊಟ್ಟಿಲ್ವಾ ಯಶ್ ಅಮ್ಮ!? ಅಷ್ಟಕ್ಕೂ ಏನಿದು ವಿವಾದ?
ಆಗಸ್ಟ್ 1ರಂದು ಅದ್ದೂರಿಯಾಗಿ ಬಿಡುಗಡೆಯಾದ ‘ಕೊತ್ತಲವಾಡಿ’ ಸಿನಿಮಾ ಇದೀಗ ಒಟಿಟಿಯಲ್ಲಿಯೂ ಪ್ರಸಾರವಾಗುತ್ತಿದೆ. ಯಶ್ ತಾಯಿ ಪುಷ್ಪ ಅವರು ನಿರ್ಮಿಸಿರುವ ಈ ಸಿನಿಮಾವನ್ನು ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.
ಆದರೆ ಚಿತ್ರದ ಕೆಲವು ಕಲಾವಿದರಿಗೆ ಇನ್ನೂ ಪಾವತಿ ಆಗಿಲ್ಲ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಈ ಕುರಿತು ಕಲಾವಿದ ಮಹೇಶ್ ಗುರು ವಿಡಿಯೋ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು, “ಈ ವಿಷಯ ಯಶ್ ತಾಯಿಗೆ ತಲುಪಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
“ನನ್ನ ಹೆಸರು ಮಹೇಶ್ ಗುರು. ನಾನು ರಂಗಭೂಮಿ ಕಲಾವಿದ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ‘ಕೊತ್ತಲವಾಡಿ’ ಚಿತ್ರದಲ್ಲಿ ಪೃಥ್ವಿ ಅಂಬರ್ ಅವರ ಜೊತೆಯಲ್ಲೂ ನಟಿಸಿದ್ದೇನೆ. ಮೂರು ತಿಂಗಳಿಗಿಂತ ಹೆಚ್ಚು ಕಾಲ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೇನೆ. ಆದರೆ ಇನ್ನೂ ಪೇಮೆಂಟ್ ಆಗಿಲ್ಲ” ಎಂದು ಅವರು ದೂರಿದ್ದಾರೆ.
ಇನ್ನೂ ಕೊತ್ತಲವಾಡಿ ಚಿತ್ರದ ಸಹ ನಟ ಮಹೇಶ್ ಆರೋಪ ಮಾಡಿದ ಬೆನ್ನಲ್ಲೇ, ಈಗ ಸಹ ನಟಿ ಸ್ವರ್ಣ ತಾಯಿ ಕೂಡ ಸಂಭಾವನೆ ಕೊಡದೇ ವಂಚನೆ ಆರೋಪ ಮಾಡಿದ್ದಾರೆ. ನಿರ್ದೇಶಕ ಶ್ರೀರಾಜ್ ಜೊತೆಗಿನ ಆಡಿಯೋ ಸಂಭಾಷಣೆಯಲ್ಲಿ ತಾಯಿಯ ಗೋಳು ವೈರಲ್ ಆಗಿದ್ದು, ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕೊತ್ತಲವಾಡಿ ಚಿತ್ರದಲ್ಲಿ ಸಹ ನಟಿಯಾಗಿ ಕೆಲಸ ಮಾಡಿದ್ದ ಸ್ವರ್ಣ ಅವರ ಸಂಭಾವನೆಯನ್ನು ಚಿತ್ರದ ನಿರ್ಮಾಪಕಿಯಾದ ಪುಷ್ಪ ಕೊಡದಿರುವುದಕ್ಕೆ ಸ್ವರ್ಣ ತಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಯಿಯೊಬ್ಬರು ನಿರ್ದೇಶಕ ಶ್ರೀರಾಜ್ ಬಳಿ ತಮ್ಮ ಕಷ್ಟವನ್ನು ತೋಡಿಕೊಂಡಿದ್ದು, ಆ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯಿಂದ ಕೊತ್ತಲವಾಡಿ ಚಿತ್ರದ ನಿರ್ಮಾಣ ತಂಡದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?