Duleep Trophy: ಶಾರ್ದೂಲ್ ಠಾಕೂರ್ ನಾಯಕತ್ವದಲ್ಲಿ ವೆಸ್ಟ್ ಝೋನ್ ತಂಡ: ಶ್ರೇಯಸ್ ಅಯ್ಯರ್’ಗೆ ಅವಕಾಶ

ಮುಂಬರುವ ದುಲೀಪ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಗಾಗಿ ವೆಸ್ಟ್ ಝೋನ್ ತಂಡವನ್ನು ಪ್ರಕಟಿಸಲಾಗಿದೆ. ಈ ಬಾರಿ ಹಿರಿಯ ಆಲ್ರೌಂಡರ್ ಶಾರ್ದೂಲ್ ಠಾಕೂರ್ ತಂಡದ ನಾಯಕತ್ವ ವಹಿಸಲಿದ್ದಾರೆ, ಉಪನಾಯಕನಾಗಿ ಅಭಿಮನ್ಯು ಈಶ್ವರನ್ ಅವರನ್ನು ಆಯ್ಕೆ ಮಾಡಲಾಗಿದೆ. ಏಕದಿನ ಮತ್ತು ಟಿ20 ಕ್ರಿಕೆಟ್ಗೆ ಹೆಚ್ಚು ಒತ್ತು ನೀಡುತ್ತಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಟೆಸ್ಟ್ ಫಾರ್ಮ್ಯಾಟ್ಗೆ ಮರಳಲು ತೀರ್ಮಾನಿಸಿದ್ದು,
ದುಲೀಪ್ ಟ್ರೋಫಿಯಲ್ಲಿ ತಮ್ಮನ್ನು ಮತ್ತೊಮ್ಮೆ ಸಾಬೀತುಪಡಿಸಲು ಸಜ್ಜಾಗಿದ್ದಾರೆ. ಅವರ ಆಯ್ಕೆ ವೆಸ್ಟ್ ಝೋನ್ ತಂಡದಲ್ಲಿ ಪ್ರಮುಖ ಹೈಲೈಟ್ ಆಗಿದ್ದು, ಇನ್ನು ಅಯ್ಯರ್ ಜೊತೆ ಸರ್ಫರಾಝ್ ಖಾನ್,ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಕೂಡ ಪಶ್ಚಿಮ ವಲಯ ತಂಡದಲ್ಲಿದ್ದಾರೆ.
ಪಶ್ಚಿಮ ವಲಯ ತಂಡ: ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಆರ್ಯ ದೇಸಾಯಿ, ಹಾರ್ವಿಕ್ ದೇಸಾಯಿ, ಶ್ರೇಯಸ್ ಅಯ್ಯರ್, ಸರ್ಫರಾಝ್ ಖಾನ್, ರುತುರಾಜ್ ಗಾಯಕ್ವಾಡ್, ಜಯಮೀತ್ ಪಟೇಲ್, ಮನನ್ ಹಿಂಗ್ರಾಜಿಯಾ, ಸೌರಭ್ ನವಲೆ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅರ್ಜಾನ್ ನಾಗವಾಸ್ವಾಲ, ದರ್ಮೇಂದ್ರ ಜಡೇಜಾ, ತುಷಾರ್ ದೇಶಪಾಂಡೆ.
ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾವುವು?
ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.
– ಉತ್ತರ ವಲಯ : ಚಂಡೀಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಸರ್ವೀಸಸ್ ತಂಡಗಳು.
-ದಕ್ಷಿಣ ವಲಯ : ಆಂಧ್ರಪ್ರದೇಶ, ಗೋವಾ, ಹೈದರಾಬಾದ್ ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ತಮಿಳುನಾಡು.
-ಕೇಂದ್ರ ವಲಯ : ಛತ್ತೀಸ್ಗಢ, ಮಧ್ಯಪ್ರದೇಶ, ರೈಲ್ವೆ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ವಿದರ್ಭ.
-ಪೂರ್ವ ವಲಯ : ಅಸ್ಸಾಂ, ಬಿಹಾರ, ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ತ್ರಿಪುರಾ.
-ಈಶಾನ್ಯ ವಲಯ : ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.
-ಪಶ್ಚಿಮ ವಲಯ : ಬರೋಡಾ, ಗುಜರಾತ್, ಮಹಾರಾಷ್ಟ್ರ, ಮುಂಬೈ ಮತ್ತು ಸೌರಾಷ್ಟ್ರ
ನಿಮ್ಮ ಪ್ರತಿಕ್ರಿಯೆ ಏನು?






