Gold Rate Today: ಗೋಲ್ಡ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್! ಬಂಗಾರ ಖರೀದಿಗೆ ಇಂದೇ ಬೆಸ್ಟ್ ಟೈಂ - ಇಳಿಕೆಯಾಯ್ತು ಚಿನ್ನದ ಬೆಲೆ

ಭಾರತದಂತಹ ದೇಶದಲ್ಲಿ ಮಹಿಳೆಯರು ಚಿನ್ನದ ಆಭರಣಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಅಲ್ಲದೆ,ಭಾರತದಲ್ಲಿ ಚಿನ್ನಕ್ಕೆ ಪವಿತ್ರ ಸ್ಥಾನವಿದ್ದು ಇದನ್ನು ಸಮೃದ್ಧಿ ಹಾಗೂ ಸಂಪತ್ತಿನ ಪ್ರತೀಕವೆಂದೇ ಭಾವಿಸಲಾಗಿದೆ. ಯಾವುದೇ ಶುಭ ಸಮಾರಂಭಗಳಿದ್ದಲ್ಲಿ ಚಿನ್ನ ಖರೀದಿ ಬಲು ಸಹಜವಾಗಿರುತ್ತದೆ.
ಚಿನ್ನವನ್ನು ಭಾರತೀಯರು ದೇವಿ ಲಕ್ಷ್ಮಿಯ ಪ್ರತೀಕ ಎಂದೇ ನಂಬುತ್ತಾರೆ. ಹಾಗಾಗಿ ಚಿನ್ನಕ್ಕೆ ಬೇಡಿಕೆ ಅಪಾರ ಇಲ್ಲಿ. ಅಲ್ಲದೆ ಒಂದು ರಾಷ್ಟ್ರದ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಚಿನ್ನದ ಕೊಡುಗೆ ಅಪಾರವಾಗಿದೆ ಎಂದರೂ ತಪ್ಪಾಗಲ್ಲ, ವಿಶೇಷವಾಗಿ ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ರಾಷ್ಟ್ರದ ಚಿನ್ನದ ಮೀಸಲು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತದೆ.
ಇನ್ನು, ಕಳೆದ ಹಲವು ದಶಕಗಳನ್ನು ಗಮನಿಸಿದರೆ ಚಿನ್ನದ ಬೆಲೆ ಒಂದು ಸ್ಥಿತಿಯಲ್ಲಿ ಯಾವತ್ತೂ ಏರುತ್ತಲೇ ಬಂದಿರುವುದರಿಂದ ಚಿನ್ನವು ಹೂಡಿಕೆಯ ವಿಷಯದಲ್ಲೂ ಸಾಕಷ್ಟು ಗಮನಸೆಳೆದಿದೆ. ಇದಷ್ಟೇ ಅಲ್ಲದೆ ದೇಶವೊಂದರ ಆರ್ಥಿಕ ಸದೃಢತೆಯಲ್ಲೂ ಚಿನ್ನ ತನ್ನ ಕೊಡುಗೆ ನೀಡುತ್ತದೆ.
ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. 8,880 ರೂ ಇದ್ದ ಆಭರಣ ಚಿನ್ನದ ಬೆಲೆ 8,765 ರೂಗೆ ಇಳಿದಿದೆ. ಎರಡು ದಿನದಲ್ಲಿ ಬೆಲೆ ಗ್ರಾಮ್ಗೆ 280 ರೂನಷ್ಟು ತಗ್ಗಿದೆ. ಕಳೆದ ವಾರಾಂತ್ಯದಲ್ಲಿ ಬೆಲೆ 9,045 ರೂ ಇತ್ತು. ವಿದೇಶಗಳಲ್ಲೂ ಬಹುತೇಕ ಕಡೆ ಬೆಲೆ ತಗ್ಗಿದೆ. ಚೀನಾ ಮತ್ತು ಅಮೆರಿಕ ನಡುವಿನ ಟ್ಯಾರಿಫ್ ಕದನಕ್ಕೆ ಈಗ 90 ದಿನಗಳ ತಾತ್ಕಾಲಿಕ ಬ್ರೇಕ್ ಸಿಕ್ಕಿರುವುದರಿಂದ ಚಿನ್ನದ ಬೆಲೆ ಮತ್ತಷ್ಟು ಇಳಿಯುವ ನಿರೀಕ್ಷೆ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 87,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,900 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 13ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,650 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,620 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,720 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,650 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,620 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 87,650 ರೂ
- ಚೆನ್ನೈ: 87,650 ರೂ
- ಮುಂಬೈ: 87,650 ರೂ
- ದೆಹಲಿ: 87,800 ರೂ
- ಕೋಲ್ಕತಾ: 87,650 ರೂ
- ಕೇರಳ: 87,650 ರೂ
- ಅಹ್ಮದಾಬಾದ್: 87,700 ರೂ
- ಜೈಪುರ್: 87,800 ರೂ
- ಲಕ್ನೋ: 87,800 ರೂ
- ಭುವನೇಶ್ವರ್: 87,650 ರೂ
ನಿಮ್ಮ ಪ್ರತಿಕ್ರಿಯೆ ಏನು?






